ಗುರುಗಾಂವ್ ಕನ್ನಡ ಸಂಘದಿಂದ ಶ್ರೀ ಸತ್ಯನಾರಾಯಣ ಪೂಜೆ ಆಯೋಜನೆ

News Desk

ಚಂದ್ರವಳ್ಳಿ ನ್ಯೂಸ್, ಹರಿಯಾಣ:
ದೆಹಲಿಯಿಂದ ಅನತಿ ದೂರದಲ್ಲಿರುವ ಹರಿಯಾಣ ರಾಜ್ಯದ ಗುರುಗಾಂವ್ ನಗರದಲ್ಲಿ ವಾಸಿಸುತ್ತಿರುವ ಕನ್ನಡಿಗರು ಅಲ್ಲಿ ಒಟ್ಟುಗೂಡಿ ಸುಮಾರು ಮೂರು ದಶಕಗಳಿಂದ ಕನ್ನಡ ಸಂಘ ಕಟ್ಟಿ ಹೊಂದಾಣಿಕೆಯಿಂದ ಗಣೇಶ ಚತುರ್ಥಿ, ಯುಗಾದಿ ಸಂಭ್ರಮ, ಕನ್ನಡ ರಾಜ್ಯೋತ್ಸವ ಮತ್ತು ಶ್ರೀ ಸತ್ಯನಾರಾಯಣ ಪೂಜೆ, ಕನ್ನಡ ಕಲಿಕಾ ಕೇಂದ್ರ ಹೀಗೆ ಹಲವಾರು ಸಮಾರಂಭಗಳನ್ನು  ಎಲ್ಲರೂ ಭಾಗಿಯಾಗಿ ಸಂಭ್ರಮದಿಂದ ಆಚರಿಸುತ್ತಾರೆ ಹಾಗೆ ಇದೆ ತಿಂಗಳು 20ನೇ ತಾರೀಖು ಗುರುಗಾಂವ್ ಕನ್ನಡ ಸಂಘದಲ್ಲಿ 21ನೇ ವಾರ್ಷಿಕೋತ್ಸವದ ಶ್ರೀ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ದೆಹಲಿ ಗುರುಗಾಂವ್ ಸುತ್ತಮುತ್ತಲಿನ ಸುಮಾರು 500 ಕ್ಕಿಂತಲೂ ಹೆಚ್ಚು ಜನರು ಸೇರಿದ್ದರಿಂದ ಕಾರ್ಯಕ್ರಮಕ್ಕೆ ಕಳೆ ಬಂದಂತಿತ್ತು.

ಸ್ವಂತ ಮನೆಯ ಸಮಾರಂಭದಂತೆ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮವು ಚಿತ್ರಣಗೊಂಡಿತ್ತು ಮಕ್ಕಳು ಮರಿಗಳು ಎಂದು ನೋಡದೆ ಹಿರಿಯರು ಕಿರಿಯರು ಎಂದು ಯಾವುದೇ ಅಳುಕಿಲ್ಲದೆ ಅವರವರಿಗೆ ವಹಿಸಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ಹೃದಯಪೂರ್ವಕವಾಗಿ ನಿರ್ವಹಿಸುತ್ತಾ ಇನ್ನು ಏನಾದರೂ ಕೆಲಸ ಉಳಿದಿದೆಯೇ ಎಂದು ತಡಬಡಿಸಿ

- Advertisement - 

ಓಡಾಡಿಕೊಂಡು ಪೂಜೆಯ ಸಮಾರಂಭದಲ್ಲಿ ಯಾವುದಕ್ಕೂ ಚ್ಯುತಿ ಬಾರದಿರಲಿ ಅನ್ಯರೆದುರು ಅಭಾಸವಾಗದಿರಲಿ ಎಂದು ಎಲ್ಲರೂ ಮಾಡುತ್ತಿದ್ದ ಶ್ರಮ ಕಾರ್ಯಕ್ರಮದ ಹಾಲಿನಲ್ಲಿ ನೆರೆದಿದ್ದ ಎಲ್ಲರಿಗೂ ಗೋಚರಿಸುವಂತಿತ್ತು ಅದರಲ್ಲೂ ಕಾರ್ಯದರ್ಶಿ ಜಿ.ಆರ್ ತಿಮ್ಮಪ್ಪ  ಅವರು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗು ಸ್ವಯಂ ಸೇವಕರು ತಾವು ವಹಿಸಿಕೊಂಡಿದ್ದ ಕೆಲಸಗಳಿಗಿಂತ್ತ ಹೆಚ್ಚು ಕೆಲಸಗಳನ್ನು ಮಾಡುತ್ತಾ ಕ್ರಿಯಾಶೀಲರಾಗಿ ಕಂಡು ಬಂದರು.

ಶ್ರೀ ಸತ್ಯನಾರಾಯಣ ಪೂಜೆಗೆಂದು ಕನ್ನಡದ ಪುರೋಹಿತರನ್ನು ಹಾಗೂ ಸತ್ಯನಾರಾಯಣ ಪೂಜೆಯ ನಂತರ ಅನ್ನದಾಸೋಹಕ್ಕಾಗಿ ಬಾಣಸಿಗರನ್ನು ಸಹ ನಮ್ಮ ರಾಜ್ಯದಿಂದಲೇ ಕರೆತಂದಿದ್ದದ್ದು ತುಂಬಾ ಮೆಚ್ಚುಗೆಯ ವಿಷಯ ಅಷ್ಟು ಜನಕ್ಕೂ ರಾಜ್ಯದಿಂದಲೇ ಊಟಕ್ಕೆ ಬಾಳೆಯ ಎಲೆ, ವೀಳ್ಯದೆಲೆ ತರಿಸಿ ಪಕ್ಕಾ ನಮ್ಮ ಊರ ಮದುವೆ ಮತ್ತು ಇನ್ನು ಮುಂತಾದ ಹಬ್ಬ ಸಂಭ್ರಮಗಳಲ್ಲಿ ಮಾಡುವಂತಹ ಖಾದ್ಯಗಳನ್ನೇ ಮಾಡಿಸಿ ಎಲ್ಲರಿಗೂ ತೃಪ್ತಿಪಡಿಸಿದ್ದು ತುಂಬಾ ಅದ್ಭುತ ವಿಷಯ.

- Advertisement - 

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸಿ.ಎಂ ನಾಗರಾಜ್ ಅವರು ಗುರುಗಾಂವ್ ಕನ್ನಡ ಸಂಘದ ಎಲ್ಲರಿಗೂ ಪ್ರಶಂಸೆ ಮಾಡಿದರು ಅಲ್ಲಿ ಅವರು ಮಾಡಿದ ಶ್ರಮವನ್ನು ಕೊಂಡಾಡಿದರು ಅಲ್ಲದೆ ಕಾರ್ಯದರ್ಶಿ ಅವರು ಬಾಣಸಿಗರನ್ನು ಊರಿನಿಂದ ಕರೆಸಿದ್ದಕ್ಕೆ ಮತ್ತು ಊರಿನಿಂದಲೇ ಬಾಳೆಯ ಎಲೆ ತರಿಸಿದ್ದಕ್ಕೆ ಹಾಗು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸಿ ಕೊಟ್ಟ ಸಮಸ್ತ ಪದಾಧಿಕಾರಿಗಳಿಗೆ, ಸದಸ್ಯರಿಗೆ ಮನಪೂರ್ವಕವಾಗಿ ಹೊಗಳಿದರು ಮತ್ತು ಎಲ್ಲರ ಶ್ರಮವನ್ನು ಮೆಚ್ಚಿದರು.

ಇಷ್ಟು ವರ್ಷದಿಂದಲೂ ಗುರುಗಾಂವ್ನಲ್ಲಿ ನಮ್ಮ ಕನ್ನಡ ಸಂಘವು ತನ್ನ ಸ್ವಂತ ಕಟ್ಟಡವಿಲ್ಲವಾದರು ಹಲವಾರು ಕಾರ್ಯಕ್ರಮಗಳನ್ನು ತಮ್ಮ ಸ್ವಂತ ಧನ ಸಹಾಯದಿಂದ ಹಾಗೂ ಒಂದೆರಡು ಕಾರ್ಯಕ್ರಮಕ್ಕೆ ದೆಹಲಿ ಕರ್ನಾಟಕ ಸಂಘದ ಸಹಯೋಗದಿಂದ  ಬೇರೆಯ ಕಟ್ಟಡಗಳನ್ನು ಬಾಡಿಗೆ ಪಡೆದು ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ನಮ್ಮ ಕರ್ನಾಟಕ ಸರ್ಕಾರದಿಂದ ಮತ್ತು ದೊಡ್ಡ ದೊಡ್ಡ ದಾನಿಗಳ ನೆರವಿನಿಂದ ಆದಷ್ಟು ಬೇಗ ಗುರುಗಾಂವ್ ಕನ್ನಡ ಸಂಘಕ್ಕೊಂದು ಜಾಗ ಮತ್ತು ದೊಡ್ಡ ಕಟ್ಟಡ ನಿರ್ಮಾಣವಾಗಲಿ ಎಂದು ಹಾರೈಸುತ್ತೇನೆ.
ಲೇಖನ:ವೆಂಕಟೇಶ ಹೆಚ್ ಚಿತ್ರದುರ್ಗ ನವದೆಹಲಿ.

                               

 

Share This Article
error: Content is protected !!
";