ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಶ್ರೀ ದತ್ತ ಜಯಂತಿ ಅಂಗವಾಗಿ ವಸಂತ ಪುರದಲ್ಲಿರುವ ಶ್ರೀ ಸಾಯಿ ಆದ್ಯಾತ್ಮಿಕ ಕೇಂದ್ರದ ಸಾಯಿ ಮಂದಿರದಲ್ಲಿ ಗುರವಾರ ಶ್ರೀ ದತ್ತ ಜಯಂತಿಯನ್ನು ಶ್ರೀ ದತ್ತ ದೇವರಿಗೆ ವಿಶೇಷ ಅಲಂಕಾರ ಪೂಜೆಯೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳಿಗ್ಗೆ ದತ್ತ ಹೋಮ, ಪೂರ್ಣಹುತಿ, ನಡೆಯಿತು ನಂತರ ಉಚಿತ ಮಹಾ ಅನ್ನ ಪ್ರಸಾದ ಏರ್ಪಡಿಸಲಾಗಿತ್ತು ಸುಮಾರು ಎರಡು ಸಾವಿರ ಭಕ್ತರು ದೇವರ ದರ್ಶನ ಪಡೆದು ಮಹಾ ಪ್ರಸಾದ ಸ್ವೀಕರಿಸಿದರು ಎಂದು ಎನ್ ನಟರಾಜ್ ಪದ್ಮನಾಭನಗರ ಇವರು ತಿಳಿಸಿದ್ದಾರೆ.

