ಕು.ಶ್ರೇಯಾ ರಂಗ ಪ್ರವೇಶ, ಕಲೆ ಸಾಹಿತ್ಯ ನಾಟ್ಯ ಸಂಸ್ಕಾರದಲ್ಲಿ ಶ್ರೀಮಂತದೇಶ ಭಾರತ:ನ್ಯಾ.ಗೋಪಾಲಗೌಡ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಲೆ, ಸಾಹಿತ್ಯ, ನಾಟ್ಯ ಹಾಗೂ ಸಂಸ್ಕಾರದಲ್ಲಿ ಇಡೀ ಪ್ರಪಂಚದಲ್ಲಿಯೇ ಭಾರತ ದೇಶ ಶ್ರೀಮಂತವಾದದ್ದು ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಗೋಪಾಲಗೌಡ ಅವರು ಹೇಳಿದ್ದಾರೆ.

ಮಲ್ಲೇಶ್ವರಂನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಏರ್ಪಡಿಸಿದ್ದ ವಕೀಲ ಆರ್.ಮಹೇಶ್ ಮತ್ತು ಆಶಾ ದಂಪತಿಗಳ ಸುಪುತ್ರಿ ಶ್ರೇಯಾ ಮಹೇಶ್ ಅವರ ರಂಗ ಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

- Advertisement - 

ಹಲವು ವಿಭಾಗದಲ್ಲಿ ದೇಶದ ಶ್ರೀಮಂತಿಕೆ ಇಲ್ಲದೆ ಇರಬಹುದು. ಆದರೆ,ಕೆಲೆ ಮತ್ತು ಸಂಸ್ಕೃತಿಕತೆಯಲ್ಲಿ ನಮ್ಮ ದೇಶ ಎಂದೂ ಹಿಂದೆ ಬಿದ್ದಿಲ್ಲ. ಇದು ನಮ್ಮ ಹೆಗ್ಗಳಿಕೆ ಎಂದರು.

ಭರತ ನಾಟ್ಯ ಎನ್ನುವುದು ನಮ್ಮ ನೆಲದಲ್ಲಿಯೇ ಬೆಳೆದು ಅರಳಿದ ಕಲೆ. ಕು.ಶ್ರೇಯ ಅವರು ಅಮೋಘವಾಗಿ ನಾಟ್ಯ ಪ್ರದರ್ಶನ ಮಾಡಿದ್ದಾರೆ. ಒತ್ತಡ, ದುಗುಡವನ್ನು ಹೊರತಾದ ಪರಿಸಥಿತಿಯಲ್ಲಿ ಮನಸ್ಸಿಗೆ ಇಂಪಾದ ವಾತಾವರಣವನ್ನು ಕಲಾ ಪ್ರದರ್ಶನ ನೀಡುತ್ತದೆ ಎಂದರು.

- Advertisement - 

ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತೆ ಕು.ಶ್ರೇಯ ಅವರನ್ನು ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿದವು. ಕಾರ್ಯಕ್ರಮದಲ್ಲ ಹೆಚ್ಚುವರಿ ಅಡ್ವಕೇಟ್ ಕಿರಣ್ ವಿ ರಾವ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ, ಯೋಗಮಿತ್ರ ಡಾ.ಎ.ಸುಬ್ರಹ್ಮಣ್ಯನ್, ಧರಣಿ ಕಶ್ಯಪ್, ಡಾ.ಸುಪರ್ಣವೆಂಕಟೇಶ್, ವಕೀಲ ಎ.ಪಿ. ರಂಗನಾಥ್, ಗೀತಾರಾಜ್ ಹಾಜರಿದ್ದರು.

 

Share This Article
error: Content is protected !!
";