ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ :
ತಾಲೂಕಿನ ಜುಮ್ಮೋಬನಹಳ್ಳಿ ಹಾಗೂ ವ್ಯಾಸರಹಟ್ಟಿ ಗ್ರಾಮದ ನಿವಾಸಿಗಳಾದ ಮಹಾಂತಮ್ಮ ಸಿ.ಟಿ ಶಶಿಕುಮಾರ್ ಮಂಜಣ್ಣ ಕಂಪಾಲಯ ಇವರುಗಳು 2025 – 26ನೇ ಸಾಲಿನಲ್ಲಿ ದ್ವಿಚಕ್ರ ವಾಹನಕ್ಕೆ ಅರ್ಜಿ ಸಲ್ಲಿಸಿದ್ದರು.
ಕೂಡ್ಲಿಗಿ ಶಾಸಕ ಡಾ.ಶ್ರೀನಿವಾಸ ಎನ್ ಟಿ ಅವರನ್ನು ಭೇಟಿ ಮಾಡಿ ನಾವು ವಿಕಲಚೇತನರಾಗಿದ್ದು ನಮಗೆ ಕಾಲಿನ ತೊಂದರೆಯಿಂದ ಓಡಾಡಲು ಅಥವಾ ಹೊಲಗಳಿಗೆ ಹಾಗೂ
ಇನ್ನಿತರ ಕೆಲಸಗಳಿಗೆ ಓಡಾಡಲು ತುಂಬಾ ತೊಂದರೆಯಾಗುತ್ತಿದೆ ಎಂದು ಮನವಿ ಮಾಡಿದ್ದೆವು ನಮ್ಮ ಕಷ್ಟ ತಿಳಿದು ನಾವು ಅರ್ಜಿ ಸಲ್ಲಿಸಿ ಸುಮಾರು ಒಂದು ತಿಂಗಳೊಳಗೆ ತ್ರಿಚಕ್ರ ವಾಹನ ಕಲ್ಪಿಸಿಕೊಟ್ಟು ನಮ್ಮ ದಾರಿ ಮಾರ್ಗಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ನಮ್ಮ ಶಾಸಕರಿಗೆ ಧನ್ಯವಾದಗಳು ಅರ್ಪಿಸುತ್ತೇವೆ ಎಂದು ತಿಳಿಸಿದರು.

