ರವಿ ಬಸ್ರೂರರಿಗೆ ಶ್ರೀಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ

News Desk

ಚಂದ್ರವಳ್ಳಿ ನ್ಯೂಸ್, ಸಿದ್ಧನಕೊಳ್ಳ:
ಇಲಕಲ್ ತಾಲೂಕಿನ ಸುಕ್ಷೇತ್ರ ಶ್ರೀ ಸಿದ್ಧನಕೊಳ್ಳದ ಜಾತ್ರಾ ವಿಶೇಷವಾಗಿ
, ಶ್ರೀ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವ-೨೦೨೫ರ ಪ್ರಶಸ್ತಿಯ ಜೊತೆಗೆ ಹೊಸದಾಗಿ ಈ ವರ್ಷ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ನೀಡಲಾಗುವುದೆಂದು ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.    

ಅವರು ಸಿದ್ಧನಕೊಳ್ಳದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಜ. ೧೪ ಮತ್ತು ೧೫ ರಂದು ಎರಡು ದಿನಗಳ ಕಾಲ ಶ್ರೀ ಸಿದ್ಧನಕೊಳ್ಳದಲ್ಲಿ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅದ್ದೂರಿಯಾಗಿ ನಡೆಯಲಿದೆ.

ಪ್ರತಿವರ್ಷದಂತೆ ಈ ವರ್ಷವೂ ಸಿದ್ಧಶ್ರೀ  ರಾಷ್ಟ್ರೀಯ ಪ್ರಶಸ್ತಿಯನ್ನು ಹಾಗೂ ರಾಜ್ಯ ಪ್ರಶಸ್ತಿಯನ್ನು ಕೊಡಲಾಗುವುದು.  ಕಳೆದ ವರ್ಷ ಚಲನಚಿತ್ರ ಖ್ಯಾತ ನಟ ಶೋಭರಾಜ ಅವರಿಗೆ ನೀಡಲಾಗಿತ್ತು. ಈ ಸಲದ ರಾಷ್ಟ್ರೀಯ ಪ್ರಶಸ್ತಿಯನ್ನು ಕೆ.ಜಿ.ಎಫ್ ಖ್ಯಾತಿಯ  ಚಲನಚಿತ್ರ ಸಂಗೀತ ನಿರ್ದೇಶಕರಾದ ರವಿಬಸರೂರ ಅವರಿಗೆ , ರಾಜ್ಯ ಪ್ರಶಸ್ತಿಯನ್ನು ಖ್ಯಾತ ಚಲನಚಿತ್ರ ಸಾಹಿತಿ,ನಿರ್ದೇಶಕ ಕೊಪ್ಪಳ ಜಿಲ್ಲೆಯ ಕಿನ್ನಾಳರಾಜು  ಅವರಿಗೆ ನೀಡಲಾಗುವುದು.

ಮತ್ತು ಉತ್ತಮ ಕಲಾವಿದೆ ಪ್ರಶಸ್ತಿಯನ್ನು ಚಲನಚಿತ್ರ ಕಲಾವಿದೆ,ಕಿರುತೆರೆ ಕಲಾವಿದೆಯಾದ ಸುನಂದಾ ಕಲಬುರ್ಗಿ ಅವರಿಗೆ ಮತ್ತು ಈ ಜಾತ್ರಾ ಮಹೋತ್ಸವಕ್ಕೆ  ಮಠದ ಭಕ್ತಾದಿಗಳು ಆಗಮಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

  ಈ ಸಂದರ್ಭದಲ್ಲಿ ಸಂಗಣ್ಣ ತುರಡಗೇರಿ,ಸಂಗಮೇಶ ಹುದ್ದಾರ, ಡಾ.ಪ್ರಭು ಗಂಜಿಹಾಳ ಚಲನಚಿತ್ರೋತ್ಸವ ಕಮಿಟಿ, ಹುಲ್ಲಪ್ಪ ಹಳ್ಳೂರ,ಹನುಮಂತ ಬಂಡಿ ಗ್ರಾನೈಟ್ ಉದ್ದಿಮೆದಾರರು, ವೀರೂ ಐಹೊಳೆ (ಜೂ ಉಪೇಂದ್ರ), ಚಲನಚಿತ್ರ ಕಲಾವಿದ ಸಂಗನಗೌಡ ಕುರುಡಗಿ, ಜಯಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಮಹೇಶ ವಡ್ಡರ ಮತ್ತಿತರರು ಉಪಸ್ಥಿತರಿದ್ದರು.

 

- Advertisement -  - Advertisement - 
Share This Article
error: Content is protected !!
";