ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಎಸ್.ಜೆ.ಎಂ.ಐ.ಟಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ೪ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ನಿತ್ಯಾ ಎಸ್, ರಮ್ಯಶ್ರೀ ಎಸ್ ಎಸ್, ಹೇಮ ಎಸ್, ಸಹನ ಜಿ ಎಸ್, ರಕ್ಷಿತಾ ಎಂ ಹೆಚ್ ಇವರುಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇವರು ನವದೆಹಲಿಯಲ್ಲಿ ಆಯೋಜಿಸಿರುವ ಸ್ಟಾರ್ಟ್ ಅಪ್ ಯಾತ್ರಾ -ಸ್ಟಾರ್ಟ್ ಅಪ್ ಮಹಾಕುಂಭ್ ಕಾರ್ಯಕ್ರಮಕ್ಕೆ ಎಸ್.ಜೆ.ಎಂ.ಐ.ಟಿ ಕಾಲೇಜನ್ನು ಪ್ರತಿನಿಧಿಸಲಿದ್ದು, ಎಸ್.ಜೆ.ಎಂ.ಐ.ಟಿ ಈ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಾಯೋಜಕತ್ವ ನೀಡಿದೆ.
ಸ್ಟಾರ್ಟ್ ಅಪ್ ಯಾತ್ರಾ ಏಪ್ರಿಲ್ ೧-೮ನೇ ತಾರೀಖಿನವರೆಗೆ ನಡೆಯಲಿದ್ದು, ಸ್ಟಾರ್ಟ್ ಅಪ್ ಮಹಾಕುಂಭ್ ಎಫ್‌ಐಸಿಸಿಐ, ಅಸೋಚಮ್, ನಾಸ್ಕಾಂ ಹಾಗೂ ಸ್ಟಾರ್ಟ್ ಅಪ್ ಇಂಡಿಯಾ ಇವರ ಸಹಯೋಗದಲ್ಲಿ ದೆಹಲಿಯ ಭಾರತ್ ಮಂಡಪಂನಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಆವಿಷ್ಕಾರಗಳನ್ನು ಪ್ರಸ್ತುತ ಪಡಿಸಲಿದ್ದಾರೆ.
೨೦೦ಕ್ಕೂ ಹೆಚ್ಚು ಹೂಡಿಕೆದಾರರು ಭಾಗವಹಿಸಲಿದ್ದು, ವಿದ್ಯಾರ್ಥಿಗಳ ಉತ್ತಮ ಆವಿಷ್ಕಾರಗಳಿಗೆ ಈ ಹೂಡಿಕೆದಾರರು ಪ್ರೋತ್ಸಾಹ ನೀಡಲಿದ್ದಾರೆ.
ವಿದ್ಯಾರ್ಥಿಗಳಿಗೆ ಆಡಳಿತಮಂಡಳಿವರು, ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.