ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಮಲ್ ಹಾಸನ್ ಕನ್ನಡಕ್ಕೆ ಅವಮಾನ ಮಾಡಿದರೂ, ಅವರ ಬೆಂಬಲಕ್ಕೆ ನಿಂತಿದೆ ಕರ್ನಾಟಕ ಕಾಂಗ್ರೆಸ್ ಸರ್ಕಾರ!! ಎಂದು ಬಿಜೆಪಿ ಆರೋಪಿಸಿದೆ.
ದೂರದ ಉತ್ತರ ಪ್ರದೇಶದಲ್ಲಿ ದನಗಳ್ಳನಿಗೆ ಧರ್ಮದೇಟು ಬಿದ್ದರೆ ಮರುಕಪಟ್ಟು ಅದರ ಬಗ್ಗೆ ಉದ್ದುದ್ದ ಟ್ವೀಟು ಬರೆಯುವ ಸಿಎಂ ಸಿದ್ದರಾಮಯ್ಯ ಅವರು, ಕನ್ನಡಕ್ಕೆ ಕಮಲ್ ಹಾಸನ್ ಅವಮಾನ ಮಾಡಿದ್ದರೂ ಅದರ ಬಗ್ಗೆ ಸಣ್ಣ ಖಂಡನೆಯನ್ನು ವ್ಯಕ್ತಪಡಿಸಿಲ್ಲ.
ಇನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕನ್ನಡಿಗರು ಲಿಮಿಟ್‌ನಲ್ಲಿರಬೇಕು ಎಂದು ತಮ್ಮ ಆ ದಿನಗಳ ಶೈಲಿಯಲ್ಲಿ ಕನ್ನಡಿಗರಿಗೆ ಎಚ್ಚರಿಕೆ ನೀಡುತ್ತಾರೆ. ಕನ್ನಡ ಹಾಗೂ ಕರ್ನಾಟಕಕ್ಕೆ ಕಾಂಗ್ರೆಸ್ ಕಪ್ಪುಚುಕ್ಕೆ ಎನ್ನುವುದಕ್ಕೆ ಇದು ಸುಸ್ಪಷ್ಟ ನಿದರ್ಶನ ಎಂದು ಬಿಜೆಪಿ ಟೀಕಿಸಿದೆ.