ನಕ್ಸಲರಿಗೆ ಶರಣಾಗುತ್ತಿರುವ ರಾಜ್ಯ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಾನವತೆಯ ವಿರೋಧಿ, ದೇಶದ ಅಭಿವೃದ್ಧಿಗೆ ಕಂಟಕವಾಗಿದದ್ದು ನಕ್ಸಲಿಸಂ. ಈ ನಕ್ಸಲಿಸಂಗೆ ದೇಶದ ಶೇ 70ರಷ್ಟು ಭಾಗ ಸಾವು- ನೋವು, ಬರ್ಬರತೆಗೆ ಬಲಿಯಾಗಿದ್ದು ಇತಿಹಾಸ.

ಕೇಂದ್ರ ಸರ್ಕಾರದ ಇಚ್ಛಾಶಕ್ತಿಯಿಂದ ಇಂದು ನಕ್ಸಲಿಸಂ ಮರೆಯಾಗುತ್ತಿರುವುದು ಆಶಾದಾಯಕವಾದ ಸಂಗತಿಯಾಗಿದೆ. ನಕ್ಸಲಿಸಂನ ಸಿದ್ದಾಂತ ಮತ್ತು ಚಳುವಳಿಗಳು ಕಾಲಬಾಹಿರವಾಗುತ್ತಿರುವ ಸಂದರ್ಭದಲ್ಲಿ, ಇದರ ಮೂಲಕ ಏನನ್ನೂ ಸಾಧಿಸಲಾಗುವುದಿಲ್ಲ ಎಂಬ ಜ್ಞಾನೋದಯ ಉಂಟಾಗಿ ಶರಣಾಗುತ್ತಿರುವುದು ಸ್ವಾಗತಾರ್ಹ.

ಕರ್ನಾಟಕದಲ್ಲಿ ಸರ್ಕಾರಕ್ಕೆ ಶರಣಾಗಿರುವ 6 ನಕ್ಸಲರ ಮೇಲೆ 30-40 ಕ್ಕಿಂತ ಹೆಚ್ಚು ಕೇಸ್‌ಗಳು ಇದೆ. ಅಲ್ಲದೇ ತಮ್ಮ ಜೀವನದೂದ್ದಕ್ಕೂ ಕಾನೂನು ಬಾಹಿರ ಚಟುವಟಿಕೆಗಳು, ಹಲವಾರು ದುಷ್ಟ ಕೃತ್ಯಗಳಲ್ಲಿ ಮತ್ತು ಬರ್ಬರತೆಯಲ್ಲಿ ಭಾಗವಹಿಸಿ ಜೀವನದ ಸಂಧ್ಯಾಕಾಲದಲ್ಲಿ ಶರಣಾಗುತ್ತಿರುವುದನ್ನು ನೋಡಿದರೆ ಖೇದಕರವೆನಿಸುತ್ತದೆ.

ವಿಪರ್ಯಾಸ ಎಂದರೆ ಕಾನೂನಿನ ಮೂಲಕ ಶರಣಾಗತಿಯನ್ನು ಮಾಡಿಸಬೇಕಾಗಿದ್ದ ಸರ್ಕಾರ ತಾನೇ ನಕ್ಸಲರಿಗೆ ಶರಣಾಗುತ್ತಿರುವುದು ದುರಾದೃಷ್ಟಕರ ಎನಿಸಿದೆ. ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಮತ್ತು ಮುಖ್ಯವಾಹಿನಿಗೆ ಬಂದು ಇತರಂತೆ ಬಾಳಲು ಅವಕಾಶವನ್ನು ಕೊಟ್ಟಿರುವ ಸರ್ಕಾರದ ಯೋಜನೆಯನ್ನು ದುರುಪಯೋಗ ಪಡೆದುಕೊಳ್ಳುತ್ತಿರುವುದಲ್ಲದೇ, ಇತರರಿಗೆ ತಮ್ಮ ಮಾನವ ವಿರೋಧಿ ಮಾರ್ಗದಲ್ಲಿ ನಡೆಯುತ್ತಿರುವವರಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ. ಸಾವಿರಾರು ಅಮಾಯಕ ಜನರ, ಪೊಲೀಸರ ಪ್ರಾಣವನ್ನು ತೆಗೆದಿರುವರಿಗೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಗೃಹ ಕಛೇರಿ ಕೃಷ್ಣದಲ್ಲಿ ಶರಣಾಗತಿಯನ್ನು ಮಾಡಿಸುತ್ತಿರುವುದು ಮತ್ತು ವೈಭವಕರಿಸುತ್ತಿರುವುದು ರಾಜ್ಯದ ಜನತೆಗೆ ಮತ್ತು ಮಾನವೀಯ ಸಮಾಜಕ್ಕೆ ಮಾಡುತ್ತಿರುವ ಅವಮಾನ ಮತ್ತು ಮೋಸದ ಸಂಗತಿಯಾಗಿದೆ.

ಪ್ಯಾಕೇಜ್ ಪೋಷಣೆ ರಾಜ್ಯದ ಜನರಿಗೆ ಮಾಡುತ್ತಿರುವ ಅನ್ಯಾಯ, ಆರ್ಥಿಕವಾಗಿ ದಿವಾಳಿಯಾಗುತ್ತಿರುವ ಸಂದರ್ಭದಲ್ಲಿ ರಾಜ್ಯದ ಜನರ ತೆರಿಗೆ ಹಣದಲ್ಲಿ ಮನಬಂದಂತೆ ಪ್ಯಾಕೇಜ್ ಗಳನ್ನು ಪೋಷಣೆ ಮಾಡುತ್ತಿರುವುದು ನಕ್ಸಲಿಸಂನಲ್ಲಿ ಬರ್ಬರತೆಗೆ ಸಾವಿಗೀಡಾದ ಅಮಾಯಕರು, ಪೊಲೀಸರು. ಸಮಾಜದ ವ್ಯವಸ್ಥೆಗೆ ಮಾಡುವ ಅನ್ಯಾಯವಾಗಿದೆ. ಆದ್ದರಿಂದ ಸರಿಯಾದ ಕಾನೂನು ಚೌಕ್ಕಟ್ಟಿನಲ್ಲಿ ಶರಾಣಾಗತಿಯಲ್ಲಿ ಮಾಡಿಸಬೇಕು. ಎಲ್ಲ ಕೇಡ್ಗಳು ನ್ಯಾಯಾಲಯದಲ್ಲಿ ಇತ್ಯಾರ್ಥವಾದ ಮೇಲೆ ಪ್ಯಾಕೇಜ್ ಗಳನ್ನು ಘೋಷಣೆ ಮಾಡಬೇಕು ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ಕನಕರಾಜ್ ಕೋಡಿಹಳ್ಳಿ ಆಗ್ರಹಿಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";