ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯ ಸಂಸ್ಕೃತ ಧಾರ್ಮಿಕ ಪಠಣ (ಭಗವದ್ಗೀತೆ) ವಿಭಾಗದಲ್ಲಿ ತೀರ್ಥಹಳ್ಳಿಯ ವಾಗ್ದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾನಿಕ ಎಂ. ಹೆಗಡೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಶಿಕ್ಷಕರುಗಳಾದ ಮಹಾಬಲೇಶ್ವರ ಹೆಗಡೆ ಮತ್ತು ರೇಣುಕಾ ಹೆಗಡೆ ದಂಪತಿಯ ಪುತ್ರಿ ಸಾನಿಕ ಎಂ. ಹೆಗಡೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾಳೆ.
ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಅವರು ಸಾನಿಕ ಎಂ. ಹೆಗಡೆ ಅವರಿಗೆ ಬಹುಮಾನ ವಿತರಣೆ ಮಾಡಿ ಗೌರವಿಸಿದರು.