ಡಿ. 30 ರಂದು ವಿಷ್ಣು ಪುಣ್ಯ ದಿನ, ರಾಜ್ಯ ಮಟ್ಟದ ಪದಬಂಧ ಸ್ಪರ್ಧೆ ಇಂದುಶೇಖರ್

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಸಾಹಸ ಸಿಂಹ ಡಾ. ವಿಷ್ಣುವರ್ಧನ್ ರವರ
16ನೇ ವರ್ಷದ ಪುಣ್ಯ ದಿನದ ಅಂಗವಾಗಿ ರಾಜ್ಯ ಮಟ್ಟದ ವಿಷ್ಣು ಪದಬಂಧ ಸ್ವರ್ಧೆ ಹಾಗೂ ವಿಷ್ಣು ನೆನಪಿನೋತ್ಸವ ಕಾರ್ಯಕ್ರಮವನ್ನು ಡಿ. 30 ರಂದು ಬೆಳಗ್ಗೆ 11  ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದೆ ಎಂದು  ಕನ್ನಡ ನೆಲ ಜಲ ಸಂಸ್ಕೃತಿಕ ವೇದಿಕೆಯ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್  ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಕಳೆದ 15 ವರ್ಷಗಳಿಂದ ನಿರಂತರವಾಗಿ ಡಾ. ವಿಷ್ಣುವರ್ಧನ ನೆನಪಿನೋತ್ಸವ ಕಾರ್ಯಕ್ರಮವನ್ನು  ಬಹಳ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದೇವೆ.

- Advertisement - 

ಈ ಬಾರಿ ವಿಶೇಷವಾಗಿ  ವಿಷ್ಣುವರ್ಧನ  ನಟಿಸಿರುವ ಚಲನಚಿತ್ರಗಳನ್ನುಳಗೊಂಡ ರಾಜ್ಯ ಮಟ್ಟದ ಪದ ಬಂಧ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದು, ಕಾರ್ಯಕ್ರಮವನ್ನು ಡಿವೈಎಸ್ಪಿ  ಸ್ನೇಹಾ ರಾಜ್  ಅವರು ಉದ್ಘಾಟಿಸಲಿದ್ದಾರೆ. ವಿಷ್ಣು ಅವರ ಭಾವ ಚಿತ್ರಕ್ಕೆ ಚುಡಾ ಅಧ್ಯಕ್ಷ ಮಹಮದ್ ಅಸ್ಗರ್(ಮುನ್ನಾ) ಪುರ್ಷ್ಪಾಚನೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ  ಬಜಾಜ್ ಶೋ ರೂಂ ಮಾಲೀಕರು ಹಾಗು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಹೊನ್ನಹಳ್ಳಿ ಪಿ. ವೃಷಬೇಂದ್ರಪ್ಪ, ಉದ್ಯಮಿಶ್ರೀನಿಧಿ ಕುದರ್ ಹಾಗೂ ಚಲನಚಿತ್ರ ರಂಗ  ಗಣ್ಯರು ಸಹ ಭಾಗವಹಿಸಲಿದ್ದಾರೆ.  ಸಾಂಸ್ಕೃತಿಕ ಚಿಂತಕ ಸುರೇಶ್ ಎನ್. ಋಗ್ವೇದಿ ಅವರು ನುಡಿನಮನ ಸಲ್ಲಿಸಿದರೆ,  ಕನ್ನಡ ನೆಲ ಜಲ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.

- Advertisement - 

 ರಾಜ್ಯ ಮಟ್ಟದ ವಿಷ್ಣು ಪದ ಬಂಧ ಸ್ಪರ್ಧೆಯು ಡಿ. 30 ರ ಮಂಗಳವಾರ ಅದೇ ಸ್ಥಳದಲ್ಲಿ ನಡೆಸಲಾಗುತ್ತದೆ. ರಾಜ್ಯ ಮಟ್ಟದ ವಿಷ್ಣು ಪದಬಂಧ ಸ್ಪರ್ಧೆಯಲ್ಲಿ 15 ಸಾವಿರ ರೂ. ಪ್ರಥಮ, 10 ಸಾವಿರ ರೂ. ದ್ವಿತೀಯ ಹಾಗೂ ಐದು ಸಾವಿರ ರೂ.ಗಳನ್ನು ತೃತೀಯ ಬಹುಮಾನವಾಗಿ ನೀಡಲಾಗುತ್ತದೆ.

ಐದು ಮಂದಿಗೆ ಸಮಾಧಾನಕರ ಬಹುಮಾನಗಳಿಗೆ ಎರಡು  ಸಾವಿರ ರೂ.ಗಳ ಬಹುಮಾನ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು.   ಡಿ. 29ರ ಸೋಮವಾರ  ಸಂಜೆ 5 ಗಂಟೆಯೊಳಗೆ ಅಸಕ್ತರು  ನೂರು ರೂ.ಗಳ ಪ್ರವೇಶ ಶುಲ್ಕ ನೀಡಿ, ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ಉಮ್ಮತ್ತೂರು ಇಂದು ಶೇಖರ್ ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿಷ್ಣು ಅಭಿಮಾನಿಗಳು, ಸಾರ್ವಜನಿಕರು ಆಗಮಿಸಿ, ಯಶಸ್ವಿಗೊಳಿಸಿಕೊಡಬೇಕೆಂದು ವೇದಿಕೆಯ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ  ವೇದಿಕೆಯ ಸಂಚಾಲಕರಾದ ಆಲೂರು ಮಲ್ಲು, ಜ. ಸುರೇಶ್‌ನಾಗ್, ಕೂಸಣ್ಣ, ರಾಮಸಮುದ್ರ ವೇಣುಗೋಪಾಲ್, ವಕೀಲ ಮಲ್ಲು, ಅನಂದ ಭಗೀರಥ ಇತರರು ಇದ್ದರು.

 

 

 

 

Share This Article
error: Content is protected !!
";