ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಕೃತಜ್ಞತೆಗಳ ಅಭಿನಂದನೆಗಳನ್ನು ಸಲ್ಲಿಸಿದರು.
ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿರುವ ಒಕ್ಕಲಿಗರ ಸಂಘದ ವೈದ್ಯಕೀಯ ಕಾಲೇಜಿನ ನಿವೇಶನಕ್ಕೆ ಸಂಬಂಧಿಸಿದಂತೆ ರಾಜ್ಯ ಒಕ್ಕಲಿಗರ ಸಂಘವು ಸರಿ ಸುಮಾರು 88 ಕೋಟಿ ರೂಪಾಯಿಗಳ ಬಡ್ಡಿ ಹಣವನ್ನು ರಾಜ್ಯ ಸರ್ಕಾರಕ್ಕೆ ಕಟ್ಟಬೇಕಾಗಿತ್ತು.
ಆದರೆ ಒಕ್ಕಲಿಗರ ಸಂಘದ ಸೇವಾ ಸಂಕಲ್ಪದ ನೀತಿಯನ್ನು ಗಮನಿಸಿದ ರಾಜ್ಯಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಒಕ್ಕಲಿಗ ಸಂಘವು ಸರ್ಕಾರಕ್ಕೆ ಕಟ್ಟಬೇಕಾದ 88 ಕೋಟಿಯಷ್ಟು ಬಡ್ಡಿ ಹಣವನ್ನು ಮನ್ನಾ ಮಾಡಿಸಿದ್ದಾರೆ.
ಡಿಸಿಎಂ ಮಾಡಿರುವ ಸೇವೆಗೆ ರಾಜ್ಯ ಒಕ್ಕಲಿಗರ ಸಂಘವು ಡಿಸಿಎಂ ಡಿಕೆಶಿ ಅವರ ಮನೆಗೆ ತೆರಳಿಸಿ ಗೌರವಿಸಿದೆ.
ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚೆಗೌಡ, ಆಡಳಿತ ಮಂಡಳಿಯ ಪದಾಧಿಕಾರಿಗಳ ಸ್ಥಾನದಲ್ಲಿರುವ ಚಿತ್ರದುರ್ಗ ಜಿಲ್ಲೆಯಿಂದ ಆಯ್ಕೆಯಾಗಿರುವ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬೇತೂರು ಪಾಳ್ಯಜೆ ರಾಜು ಸೇರಿದಂತೆ ಇನ್ನುಳಿದ ನಿರ್ದೇಶಕರುಗಳು ಹಾಜರಿದ್ದರು.
ಡಿ ಕೆ ಅವರ ನಿವಾಸಕ್ಕೆ ತೆರಳಿ ಗೌರವಿಸಿದ್ದಾರೆ.
ಡಿ ಕೆ ಶಿವಕುಮಾರ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಸರ್ವಜನಾಂಗದ ಹಿತದೃಷ್ಟಿಗೆ ಶ್ರಮಿಸಲಿ ಎಂದು ಒಕ್ಕಲಿಗರ ಸಂಘ ಆಶಿಸುತ್ತದೆ ಎಂದು ರಘು ಗೌಡ ಮಾಹಿತಿ ನೀಡಿದ್ದಾರೆ.