ರಾಜ್ಯದ ವಕ್ಫ್ ಆಸ್ತಿ 1.12 ಲಕ್ಷ ಎಕರೆ!?-ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ
, ಖಾಸಗಿ ಸುದ್ದಿ ವಾಹಿನಿಯಲ್ಲಿ ತಮ್ಮ ಇತ್ತೀಚಿನ ಸಂದರ್ಶನ ಗಮನಿಸಿದೆ.

ರಾಜ್ಯದಲ್ಲಿ ಒಟ್ಟು 1,12,000 ಎಕರೆ ವಕ್ಫ್ ಆಸ್ತಿ ಇದೆ ಎಂದು ಹೇಳಿದ್ದೀರಿ. ಯಾವ ಆಧಾರದ ಮೇಲೆ ಘಂಟಾಘೋಷವಾಗಿ ಇಷ್ಟು ಪ್ರಮಾಣದ ವಕ್ಫ್ ಆಸ್ತಿ ಇದೆ ಹೇಳಿದ್ದೀರಿ? ತಮ್ಮ ಬಳಿ ಇದಕ್ಕೇನಾದರೂ ಸಾಕ್ಷಿ, ಪುರಾವೆ ಇದೆಯೋ ಅಥವಾ ಕೇವಲ ವಕ್ಫ್ ಮಂಡಳಿಯವರ ಮಾತಿನ ಆಧಾರದ ಮೇಲೆ ಹೇಳುತ್ತಿದ್ದೀರೋ? ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಲಕ್ಷ 12 ಸಾವಿರ ಎಕರೆಯಲ್ಲಿ ಈಗ ಕೇವಲ 20,000 ಎಕರೆ ಮಾತ್ರ ವಕ್ಫ್ ಬೋರ್ಡ್ ಬಳಿ ಉಳಿದಿದೆ. ಮಿಕ್ಕ ವಕ್ಫ್ ಆಸ್ತಿಯೆಲ್ಲ Encroach ಆಗಿದೆ ಎಂದು ಹೇಳಿದ್ದೀರಿ. ಹಾಗಾದರೆ ನಮ್ಮ ರೈತರು, ದೇವಸ್ಥಾನಗಳು, ಮಠ-ಮಾನ್ಯಗಳು, ವಕ್ಫ್ ಆಸ್ತಿಯನ್ನ ಅತಿಕ್ರಮಣ ಮಾಡಿದ್ದಾರೆ ಎಂಬುದು ತಮ್ಮ ಮಾತಿನ ಅರ್ಥವೋ?

ಕೇವಲ ನಾಲ್ಕು ತಿಂಗಳ ಹಿಂದೆ ಜುಲೈನಲ್ಲಿ ಸ್ವತಃ ತಮ್ಮ ಸರ್ಕಾರವೇ ಸದನದಲ್ಲಿ ನೀಡಿರುವ ಲಿಖಿತ ಉತ್ತರದ ಪ್ರಕಾರ, 2016ರಲ್ಲಿ ತಾವು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದಾಗಲೇ ವಕ್ಫ್ ಆಸ್ತಿಗಳ ಖಾತಾ ಅಂದೀಕರಣಕ್ಕೆ ಸುತ್ತೋಲೆ ಹೊರಡಿಸಲಾಗಿತ್ತು. ಹೀಗಿರುವಾಗ ಈಗ ಬರೋಬ್ಬರಿ 8 ವರ್ಷಗಳ ನಂತರ ಮತ್ತೊಮ್ಮೆ ವಕ್ಫ್ ಆಸ್ತಿ ಹೆಸರಿನಲ್ಲಿ ನೋಟಿಸುಗಳನ್ನು ನೀಡುತ್ತಿರುವುದು ಯಾಕೆ?

ತಮ್ಮ ಪ್ರಕಾರ ವಕ್ಫ್ ಬೋರ್ಡ್ ನವರು ಸಾಚಾಗಳು. ಆದರೆ ನಮ್ಮ ರೈತರು, ಮಠ-ಮಾನ್ಯಗಳು, ದೇವಸ್ಥಾನಗಳು Encroachers ಗಳು. ಇದೇ ತಾನೆ ತಮ್ಮ ಮಾತಿನ ಅರ್ಥ?

ಉತ್ತರ ಕೊಡಿ ಸಿಎಂ ಸಿದ್ದರಾಮಯ್ಯ ಅವರೇ. ನಾಡಿನ ಪ್ರಜೆಗಳು ತಮ್ಮ ಉತ್ತರದ ನಿರೀಕ್ಷೆಯಲ್ಲಿದ್ದಾರೆ ಎಂದು ಅವರು ತಾಕೀತು ಮಾಡಿದ್ದಾರೆ.

 

- Advertisement -  - Advertisement - 
Share This Article
error: Content is protected !!
";