ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯಗಳು ಬೇರೆಯಾದರು, ದ್ವೇಷ ಭಾವನೆಗಳೆಲ್ಲ ಒಂದೇ! ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಹ ಪರಸ್ಪರರ ಭಾವನೆಗಳಿಗೆ ಧಕ್ಕೆಯಾದಾಗ ಕ್ರಿಯೆಗೆ ಪ್ರತಿಕ್ರಿಯೆ ಸಹಜ ಎಂದು ಕಿಡಿ ಕಾರುವ ಮೂಲಕ ಗೂಂಡಾ ಮನೋಭಾವವನ್ನು ವ್ಯಕ್ತಪಡಿಸಿದ್ದರು.
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಮ್ಮ ಕುರಿತು ಸ್ಟ್ಯಾಂಡಪ್ ಕಾಮೆಡಿಯನ್ ಕುನಾಲ್ ಕಾಮ್ರಾ ಮಾಡಿರುವ ವಿಡಂಬನೆಯನ್ನು ಸುಪಾರಿ ಕೃತ್ಯಕ್ಕೆ ಹೋಲಿಸಿದ್ದು, ಅನ್ಯರನ್ನು ಅಪಹಾಸ್ಯ ಮಾಡುವಾಗ ಸಭ್ಯತೆಯನ್ನು ಕಾಪಾಡಿಕೊಳ್ಳಬೇಕು, ಇಲ್ಲವಾದಲ್ಲಿ ಕ್ರಿಯೆಯು ಪ್ರತಿಕ್ರಿಯೆಯನ್ನು ಹುಟ್ಟು ಹಾಕುತ್ತದೆ ಎಂದು ಹೇಳುವ ಮೂಲಕ
ತಮ್ಮ ಪಕ್ಷದ ಕಾರ್ಯಕರ್ತರು ಕುನಾಲ್ ಕಾಮ್ರಾರ ಸ್ಟುಡಿಯೊ ಮೇಲೆ ದಾಳಿ ಮಾಡಿ ಎಸಗಿರುವ ಕೃತ್ಯವನ್ನು ಸಮರ್ಥಿಸಿಕೊಂಡು ಸಂಸ್ಕೃತಿ ಹೆಸರಲ್ಲಿ ಹೊಡಿ, ಬಡಿ ಹಾಗೂ ಕೊಲ್ಲುವುದೇ ಬಿಜೆಪಿಯ ತತ್ವ ಸಿದ್ಧಾಂತ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.