ಸ್ಟಿಕ್ಕರ್ ಸರ್ವೇ ಸ್ಕ್ಯಾಮ್! ಸರ್ಕಾರ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುತ್ತೇವೆ ಎನ್ನುವ ನೆಪವೊಡ್ಡಿ ಸಿಎಂ ಸಿದ್ದರಾಮಯ್ಯ ಸರ್ಕಾರ ನಡೆಸುತ್ತಿರುವ ಬೂಟಾಟಿಕೆ ಸಮೀಕ್ಷೆಯಲ್ಲಿ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ಬಾಗಿಲು ತಟ್ಟದೇ, ಸಾರ್ವಜನಿಕರನ್ನು ಮಾತನಾಡಿಸದೆ ಕೇವಲ ಸ್ಟಿಕ್ಕರ್ ಅಂಟಿಸಲು ಸೀಮಿತವಾಗಿರುವ ಸಮೀಕ್ಷೆಯಲ್ಲಿ ಈಗ ಸ್ಟಿಕ್ಕರ್ ಮುದ್ರಣದಲ್ಲೂ ಲೂಟಿ ಹೊಡೆದ ಅಂಶ ಬೆಳಕಿಗೆ ಬಂದಿದೆ.
ಬೇಕಾಬಿಟ್ಟಿಯಾಗಿ 87 ಲಕ್ಷ ರೂಪಾಯಿ ಮೌಲ್ಯದ ಸ್ಟಿಕ್ಕರ್ ಮುದ್ರಿಸಿ, ಈಗ 25 ಲಕ್ಷ ರೂಪಾಯಿ ಮೌಲ್ಯದ ಸ್ಟಿಕ್ಕರ್ ಗಳನ್ನು ಕಸದ ಬುಟ್ಟಿಗೆ ಎಸೆಯಲು ಹೊರಟಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಜನರ ತೆರಿಗೆ ಹಣವನ್ನು ಹಗಲು ದರೋಡೆ ಮಾಡುತ್ತಿದೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.