ಚಂದ್ರವಳ್ಳಿ ನ್ಯೂಸ್, ತುಮಕೂರು:
ಅಜ್ಜಿ ಸಾಕಿದ ಕೋಳಿ
ಹೆಜ್ಜೆ ಹಾಕಿ ಹೋಗುತ್ತಿತ್ತು
ಅವರಿವರ ಮನೆಯ ಮುಂದೆ…
ಅಜ್ಜಿಯ ಮನೆಯ ಬಿಟ್ಟು
ಬೇರೆಯವರ ಮನೆಯ ಮುಂದೆ
ಇಟ್ಟಿತು ಹೇಂಟೆ…
ಮನೆಯಿಂದ ಆಚೆ ಈಚೆ ಬರಲು
ಹೆದರುವರು ಬಾಂಬು ನೋಡಿದ ರೀತಿ…
ಕೋಳಿ ಸಾಕಿದ ಅಜ್ಜಿಗೆ
ಪ್ರತಿ ದಿನವೂ ಮಂಗಳಾರತಿ
ಸುತ್ತಮುತ್ತಲಿನ ಮನೆಯವರಿಂದ ತಪ್ಪದೇ…
ಹಲವರಿಗೆ ಯೋಚನೆ ಈ ಕೋಳಿ
ಎಷ್ಟು ಕೆಜಿ ಇರಬಹುದು ಎಂದು
ಹಾಗೆ ಸುಮ್ಮನೆ…
ಇನ್ನು ಹಲವರಿಗೆ ಮುಂದಿನ
ಭಾನುವಾರ ನೆಂಟರು ಬರುವರು ಮನೆಗೆ ಎಂದು
ಕಾರ, ಸಾಬಾರ, ಮಸಾಲೆ ರೆಡಿ ಮಾಡಿಕೊಂಡು
ಬರುವ ನೆಂಟರಿಗಾಗಿ ಕಾದು ಕುಳಿತರು ಕೆಲವರು…
ಕೋಳಿಗೆಲ್ಲ ತಿಳಿಯಿತು ಹಾಗೆ ಸುಮ್ಮನೆ
ಮೆಲ್ಲನೆ ಹೆಜ್ಜೆ ಹಾಕುತ್ತಿತ್ತು ದಿನಕಳೆದಂತೆ
ಯೋಚನೆಯಲ್ಲಿಯೇ…
ಅಜ್ಜಿಯ ಮುಖವ ಒಮ್ಮೆ ನೋಡಿ
ದುಃಖ ಪಟ್ಟಿತ್ತು ಹೃದಯದಿಂದ
ನಾನು ಯಾಕೆ ಕೋಳಿಯಾಗಿ ಹುಟ್ಟಿದೆ ಎಂದು…
ಅಜ್ಜಿಯು ಮೌನ
ಕೋಳಿಯು ಮೌನ
ಯಾರಿಗಿಲ್ಲ ತೊಂದರೆ…
ಶಿವನ ಪಾದ ಸೇರಿದರು
ಬೆಳಗಾಗುವುದರೊಳಗೆ…
ಕವಿತೆ-ಸರಿತ.ಹೆಚ್ ಕಾಡುಮಲ್ಲಿಗೆ..