ಜನ ಸಂಖ್ಯಾ ಆಧಾರದ ಮೇಲೆ ತಕ್ಕ ಪಾಲು ಸಿಗದಿದ್ದಲ್ಲಿ ಹೋರಾಟ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಜನಸಂಖ್ಯಾ ಆಧಾರದ ಮೇಲೆ ಜಾತಿ – ಜನಾಂಗಕ್ಕೆ ತಕ್ಕ ಪಾಲು ಎಲ್ಲರಿಗೂ ಬೇಕು ಗೌರವದ ಬಾಳು ಸಿಗದೆ ಹೋದರೆ ಇಡೀ ಕರ್ನಾಟಕದಾದ್ಯಂತ ಬೃಹತ್ ಹೋರಾಟ ಮಾಡಲಾಗುವುದು ಎಂದು ಅಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರದಾನ ಕಾರ್ಯದರ್ಶಿ ನಂದಿಗುಂದ ವೆಂಕಟೇಶ ಹೇಳಿದರು.

ಭಾರತದ ಸಂವಿಧಾನ ಪ್ರಕಾರ  ಸರ್ವರಿಗೂ ಸಮ ಪಾಲು ಸರ್ವರಿಗೂ ಸಮ ಪಾಲು ಎಂದು ಹೇಳುವುದೆ ಅಗಿದೆ ಬಿ.ಪಿ.ಮಂಡಲ್ ಆಯೋಗದ ವರದಿಯ ಪ್ರಕಾರ ದೇಶದಲ್ಲಿ ಶೇ.52 ರಷ್ಟು ಜನಸಂಖ್ಯೆಯುಳ್ಳ 3,743 ಜಾತಿಗಳು ಇತರ ಹಿಂದುಳಿದ ವರ್ಗಗಳಾಗಿವೆ (ಓಬಿಸಿ). ಅವರುಗಳಿಗೆ ಭಾರತ ಸರ್ಕಾರದ ನೌಕರಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ 27 ರಷ್ಟು ಮೀಸಲಾತಿ ನೀಡಲು ಮಾಡಿದ ಶಿಫಾರಸ್ಸು 1992 ರಲ್ಲೇ ಜಾರಿಯಾಗಿದ್ದರೂ ಕೇವಲ ಶೇ 12 ರಷ್ಟು ಹುದ್ದೆಗಳನ್ನು ಮಾತ್ರ ಈ ತನಕ ತುಂಬಲಾಗಿದೆ. ನಾವೆಲ್ಲರೂ ಹಿಂದೂ, ನಾವೇ ಬಹು ಸಂಖ್ಯಾತರಾಗಿದ್ದೇವೆ. ಎನ್ನುತ್ತಿರುವ ಶೇ. 15ಕ್ಕಿಂತಲೂ ಕಡಿಮೆ ಇರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು ರಾಜಕೀಯ ಕೃಷಿ, ಉದ್ಯೋಗ, ಶಿಕ್ಷಣ, ಉದ್ಯಮ, ವ್ಯಾಪಾರ, ಮುಂತಾದ ಎಲ್ಲಾ ಲಾಭದಾಯಕ ಕ್ಷೇತ್ರಗಳಲ್ಲಿ ಶೇ. 80ಕ್ಕಿಂತ ಹೆಚ್ಚಿನ ಪಾಲುಗಳನ್ನು ಕಬಳಿಸಿದ್ದಾರೆ. ಆದರೆ, ತಾವೂ ಹಿಂದೂಗಳುಎಂದುಕೊಂಡಿರುವ ಬಹುಸಂಖ್ಯಾತ ಹಿಂದುಳಿದ ಜಾತಿಗಳು ಗ್ರಾಮಪಂಚಾಯಿತಿ ಸ್ಥಾನವನ್ನೂ ಪಡೆಯಲಾಗದೆ ಬಡತನ, ಹಸಿವು, ಅವಮಾನ, ಅನಕ್ಷರತೆ, ನಿರುದ್ಯೋಗಗಳಲ್ಲಿ ನರಳುತ್ತಿದ್ದಾರೆ.

- Advertisement - 

ಭಾರತದ ಮಟ್ಟಿಗೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು ನಡೆಸುತ್ತಿರುವ ದಗಲ್ಬಾಜಿತನದ ರಾಜಕಾರಣವನ್ನೇ ಕರ್ನಾಟಕದಲ್ಲಿ ಒಕ್ಕಲಿಗ, ಲಿಂಗಾಯಿತ, ಬ್ರಾಹ್ಮಣರು ಮಾಡುತ್ತಿದ್ದಾರೆ. 1921ರಲ್ಲಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಜಾರಿ ಮಾಡಿದ ಶೇ. 75 ಮೀಸಲಾತಿಯಲ್ಲಿ ಅತಿಹೆಚ್ಚಿನ ಲಾಭವನ್ನು ಕಬಳಿಸಿದ ಒಕ್ಕಲಿಗ ಮತ್ತು ಲಿಂಗಾಯಿತರೇ ಇಂದು ನಮ್ಮ ರಾಜ್ಯದಲ್ಲಿ ನೇಮಕಗೊಂಡ ಹಿಂದುಳಿದ ವರ್ಗಗಳ ಆಯೋಗಗಳ ಎಲ್ಲಾ ವರದಿಗಳನ್ನು ವಿರೋಧಿಸುತ್ತಾ ಬಂದಿದ್ದಾರೆ.

2025 ರಲ್ಲಿ ಮಂಡಿಸಲ್ಪಟ್ಟ ಕಾಂತರಾಜ್ ಆಯೋಗದ ವರದಿಯನ್ನು ಜಾರಿಯಾಗದಂತೆ ಮಾಡಿದ್ದಲ್ಲದೆ, ಇದೀಗ ನಡೆಯುತ್ತಿರುವ ಎರಡನೇಯ ಸಮೀಕ್ಷೆಯನ್ನೂ ಸಹ ತಡೆಯಲು ಬ್ರಾಹ್ಮಣ, ಲಿಂಗಾಯುತ, ಒಕ್ಕಲಿಗರಲ್ಲಿರುವ ಜಾತಿಗಳಲ್ಲಿರುವ ಮನುವಾದಿಗಳು ಪಿತೂರಿಗಳನ್ನು ಮಾಡುತ್ತಿದ್ದಾರೆ ಎಂದರು.

- Advertisement - 

ನಂತರ ರಾಜ್ಯ ಕಾರ್ಯದರ್ಶಿ ಬಸವರಾಜ್ ಮಾತನಾಡಿ ರಾಜ್ಯದಲ್ಲಿ ಈತನಕ ಬಂದಿರುವ ಎಲ್ಲಾ ಆಯೋಗಗಳು ಎಸ್‌ಸಿ/ಎಸ್‌ಟಿ/ಓಬಿಸಿಗಳ ಜನಸಂಖ್ಯೆಯು ಶೇ 70 ಕ್ಕಿಂತಲೂ ಹೆಚ್ಚಿದೆ ಹಾಗೂ ಮೇಲ್ಟಾತಿಗಳ ಜನಸಂಖ್ಯೆಯು ಶೇ 30 ಕ್ಕಿಂತಲೂ ಕಡಿಮೆಯಿದೆ ಎಂದು ಹೇಳಿರುವ ಸತ್ಯಸಂಗತಿಯೇ ಅವರ ವಿರೋಧಕ್ಕೆ ಕಾರಣವಾಗಿದೆ.

ಕಾಂತರಾಜ್ ಆಯೋಗದ ವರದಿಯು ಎಸ್‌ಸಿ (18.27%) ಮತ್ತು ಎಸ್‌ಟಿ (7.16%) ಗಳು ಶೇ. 25.43 ಇರುವುದಾಗಿಯೂ, ಮುಸ್ಲಿಂ (12.87%), ಕ್ರೈಸ್ತರನ್ನು (1.58%), ಒಳಗೊಂಡ ಓಬಿಸಿಗಳು (42%) ಒಟ್ಟು ಶೇ 69.68 ಇರುವುದಾಗಿಯೂ ಹೇಳಿದೆ. ಆದರೆ, ಲಿಂಗಾಯಿತರು (11.93%), ಒಕ್ಕಲಿಗರು (10.31%), ಬ್ರಾಹ್ಮಣರು (2.62%), ಮತ್ತಿತರ ಎಲ್ಲಾ ಮೇಲ್ಟಾತಿಗಳೂ ಕೂಡಿ ಶೇ 28 ಕ್ಕಿಂತ ಕಡಿಮೆಯಿರುವುದಾಗಿ ವರದಿ ಮಾಡಿದೆ. ಅಲ್ಲದೆ, ಈ ವರದಿಯು ಒಕ್ಕಲಿಗ-ಲಿಂಗಾಯಿತರು ಒಳಗೊಂಡಂತೆ ಎಲ್ಲಾ ಹಿಂದುಳಿದ ವರ್ಗಗಳಿಗೆ ಶೇ 51 ರಷ್ಟು ಮೀಸಲಾತಿ ಶಿಫಾರಸ್ಸು ಮಾಡಿದೆ ಮತ್ತು ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಶೇ 75 ಕ್ಕೆ ಹೆಚ್ಚಿಸಬೇಕೆಂದು ಶಿಫಾರಸ್ಸು ಮಾಡಿದೆ.

ಇಂತಹ ಸ್ಫೋಟಕ ಸತ್ಯಗಳನ್ನು ಮತ್ತು ಕ್ರಾಂತಿಕಾರಿ ವಿಷಯಗಳನ್ನು ಹೊರಗೆಡುವಿರುವುದನ್ನು ಕಂಡು ಮನುವಾದಿ ಜಾತಿಗಳು ಬೆಚ್ಚಿಬಿದ್ದಿದ್ದಾರೆ! ಅದ್ದರಿಂದಲೇ ಈ ಆಯೋಗಗಳನ್ನೇ ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಲು ತಮ್ಮ ಸಮುದಾಯಗಳ ಮುಗ್ಧ ಜನರನ್ನು ಪ್ರಚೋದಿಸುತಿದ್ದಾರೆ ಎಂದರು.

 ಈ ಸಂದರ್ಭದಲ್ಲಿ ತಾ.ಅಧ್ಯಕ್ಷ ನಂಜೇಶ್,  ಉಪಾಧ್ಯಕ್ಷ ಮುನೀಂದ್ರ. ಪ್ರಧಾನ ಕಾರ್ಯದರ್ಶಿ ದಾಳಪ್ಪ, ಜಿಲ್ಲಾಧ್ಯಕ್ಷ ಪಿ .ಮಹದೇವ್, ಜಿಲ್ಲಾ ಖಜಾಂಚಿ ಹೇಮಾ, ಮಹಿಳಾ ಜಿಲ್ಲಾಧ್ಯಕ್ಷೆ ರಾಧಮ್ಮ,  ದೇವನಹಳ್ಳಿ ಉಪಾಧ್ಯಕ್ಷ ಮಂಜುನಾಥ, ವೇಣುಗೋಪಾಲ್, ಹನುಮಂತಪ್ಪ ಹಾಜರಿದ್ದರು.

 

Share This Article
error: Content is protected !!
";