ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಹೊಳಲ್ಕೆರೆ ತಾಲ್ಲೂಕು ನಂದಿಹಳ್ಳಿ ಗ್ರಾಮದ ಲಕ್ಷ್ಮೀ ಸುರೇಶ್ ನಾಯ್ಕ್ (18) ಕಾಣೆಯಾದ ಕುರಿತು ಡಿ.16 ರಂದು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಕ್ಷ್ಮೀ ದಾವಣಗೆರೆ ಸೀತಮ್ಮ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದ್ದು, ದ್ವೀತಿಯ ಪಿ.ಯು.ಸಿ ಪರೀಕ್ಷೆಯಲ್ಲಿ ಅನುತೀರ್ಣರಾಗಿರುತ್ತಾಳೆ. ಡಿ.15 ರಂದು ಪರೀಕ್ಷೆ ಶುಲ್ಕ ಪಾವತಿಸಿ ಬರುವುದಾಗಿ ಕಾಲೇಜಿಗೆ ಹೋದವಳು ತಿರುಗಿ ಮನೆಗೆ ಬಂದಿರುವುದಿಲ್ಲ. ಲಕ್ಷ್ಮೀ 4.8 ಅಡಿ ಎತ್ತರವಿದ್ದು, ಸಾದಾರಣ ಮೈಕಟ್ಟು, ಅಗಲವಾದ ಮುಖ, ಗೋಧಿ ಮೈ ಬಣ್ಣ ಹೊಂದಿದ್ದಾಳೆ. ಕನ್ನಡ ಮತ್ತು ಲಂಬಾಣಿ ಭಾಷೆ ಮಾತನಾಡುತ್ತಾಳೆ.
ಗುರುತು ಪತ್ತೆಯಾದವರು ಚಿಕ್ಕಜಾಜೂರು ಪೊಲೀಸ್ ಇನ್ಸೆಪಕ್ಟರ್ ಮೊಬೈಲ್ ಸಂಖ್ಯೆ 9480803150 ಹಾಗೂ ಹೊಳಲ್ಕೆರೆ ಪೊಲೀಸ್ ವೃತ್ತ ನಿರೀಕ್ಷರ ಮೊಬೈಲ್ ಸಂಖ್ಯೆ 9480803135 ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.

