ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಾನ್ವಿ ಟೈಕೊಂಡೋ ಅಕಾಡೆಮಿ ವತಿಯಿಂದ ಕಳೆದ ಭಾನುವಾರ ಕಲರ್ ಬೆಲ್ಟ್ ಪರೀಕ್ಷೆ ನಡೆಸಲಾಯ್ತು. ಈ ಪರೀಕ್ಷೆಯಲ್ಲಿ ಎಲ್ಲೊ, ಗ್ರೀನ್, ಗ್ರೀನ್ ಒನ್ ಬೆಲ್ಟ್ ವಿಭಾಗದಲ್ಲಿ ಸುಮಾರು ಹದಿನಾಲ್ಕು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸ್ಪರ್ದಿಸಿದ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ವಿಶೇಷ ಸಂಗತಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಟೈಕೊಂಡೋ ಪರೀಕ್ಷಕ ಡಾ.ಕೃಷ್ಣ ಚೈತನ್ಯ ಸೇರಿದಂತೆ ಹಲವಾರು ಗಣ್ಯರು ಅಭಿನಂದಿಸಿದ್ದಾರೆ.

