ವಿದ್ಯಾರ್ಥಿಗಳು ಕಾನೂನು ಬದ್ಧ ವಯಸ್ಸು ತಲುಪಿದ ನಂತರವೇ ಚಾಲನೆ ಮಾಡಬೇಕು

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕು ಕಾನೂನು ಸೇವೆ ಸಮಿತಿ ವಕೀಲರ ಸಂಘ ಅಭಿ ಯೋಜನ ಇಲಾಖೆ ಪೊಲೀಸ್ ಇಲಾಖೆ ಇಲಾಖೆ, ಶ್ರೀಮೋಕ್ಷಗೊಂಡಮ್ ವಿಶ್ವೇಶ್ವರಯ್ಯ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ರಸ್ತೆ ಸುರಕ್ಷತೆ ಮಾಸಾಚಾರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ನಗರದ ಮೋಕ್ಷಗೊಂಡಮ್ ವಿಶ್ವೇಶ್ವರಯ್ಯ ವಿದ್ಯಾ ಮಂದಿರದಲ್ಲಿ ಆಯೋಜಿಸಲಾಗಿತ್ತು.

ರಸ್ತೆ ಸುರಕ್ಷತೆ ಮಾಸಾಚಾರಣೆ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಜೆಎಂಎಫ್‌ಸಿ ಹಾಗೂ ಅಧ್ಯಕ್ಷರು ತಾಲೂಕು ಕಾನೂನು ಸೇವಾ ಸಮಿತಿ ಶ್ರೀಮತಿ ಸುಜಾತ ಸುವರ್ಣ ಬಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

- Advertisement - 

ಸಂಚಾರ ನಿಯಮಗಳನ್ನು ಪಾಲಿಸಬೇಕು. ರಸ್ತೆಯಲ್ಲಿ ನಿಧಾನವಾಗಿ, ಜಾಗರೂಕತೆಯಿಂದ ಮತ್ತು ಸಂಚಾರನಿಯಮಗಳನ್ನು ಪಾಲಿಸಿಕೊಂಡು ಚಾಲನೆ ಮಾಡಬೇಕು. ಸಿಗ್ನಲ್‌ಗಳು, ರಸ್ತೆ ಗುರುತುಗಳು ಮತ್ತು ವೇಗ ಮಿತಿಯನ್ನು ಗಮನಿಸಬೇಕು ಹಾಗೂ ಪಾದಚಾರಿಗಳು ಮತ್ತು ಇತರ ವಾಹನಗಳಿಗೆ ತೊಂದರೆ ಆಗದಂತೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಆದರೆ ನಿಯಮಗಳನ್ನು ಪಾಲಿಸದೆ ಅಜಾಗರೂಕವಾಗಿ ಚಾಲನೆ ಮಾಡಿದರೆ ಅಪಘಾತಗಳು ಸಂಭವಿಸಿ ಗಾಯಗಳು ಅಥವಾ ಜೀವಹಾನಿ ಆಗಬಹುದು, ವಾಹನಗಳಿಗೆ ಹಾನಿಯಾಗುತ್ತದೆ ಮತ್ತು ದಂಡ ಹಾಗೂ ಕಾನೂನು ಸಮಸ್ಯೆಗಳು ಎದುರಾಗುತ್ತವೆ.

ವಿದ್ಯಾರ್ಥಿಗಳು ಕಾನೂನುಬದ್ಧ ವಯಸ್ಸು ತಲುಪಿದ ನಂತರವೇ ವಾಹನ ಚಾಲನೆ ಮಾಡಬೇಕು. ಸಾಮಾನ್ಯವಾಗಿ 16 ವರ್ಷ ತುಂಬಿದವರು ಗೇರ್ ಇಲ್ಲದ ದ್ವಿಚಕ್ರ ವಾಹನವನ್ನು ಮತ್ತು 18 ವರ್ಷ ತುಂಬಿದವರು ಎಲ್ಲಾ ವಾಹನಗಳನ್ನು ಚಾಲನೆ ಮಾಡಬಹುದು.

- Advertisement - 

ಈ ವಯಸ್ಸು ತಲುಪಿದ ನಂತರ ಪ್ರಾದೇಶಿಕ ಸಾರಿಗೆ  ಆರ್ ಟಿ ಓ ಮೂಲಕ ಮೊದಲು ಲರ್ನರ್ ಲೈಸೆನ್ಸ್ ಪಡೆದು, ಚಾಲನಾ ಪರೀಕ್ಷೆ ಉತ್ತೀರ್ಣರಾದ ಮೇಲೆ ಶಾಶ್ವತ ಚಾಲನಾ ಪರವಾನಗಿ ನೀಡಲಾಗುತ್ತದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುಜಾತ ಸುವರ್ಣ ಬಿ ತಿಳಿಸಿದರು.

   ಪ್ರಧಾನ ಸಿವಿಲ್ ನ್ಯಾಯಾಧೀಶರು ಶ್ರೀಧರ್ ಎಚ್.ಡಿ. ಮಾತನಾಡಿ ರಸ್ತೆ ಸುರಕ್ಷತೆ ಪ್ರತಿಯೊಬ್ಬರ ಜೀವನಕ್ಕೆ ಬಹಳ ಮುಖ್ಯ. ರಸ್ತೆ ಅಪಘಾತಗಳು ಅಜಾಗರೂಕ ಚಾಲನೆ, ಅತಿವೇಗ, ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ಗಮನ ತಪ್ಪುವುದರಿಂದ ಸಂಭವಿಸುತ್ತವೆ.

ಇಂತಹ ಅಪಘಾತಗಳು ಕೆಲವೊಮ್ಮೆ ಗಂಭೀರ ಗಾಯಗಳಿಗೆ ಕಾರಣವಾಗುತ್ತವೆ ಮತ್ತು ಕೆಲ ಸಂದರ್ಭಗಳಲ್ಲಿ ಜೀವ-ಮರಣದ ಪ್ರಶ್ನೆಯಾಗುತ್ತದೆ. ಒಂದು ಸಣ್ಣ ತಪ್ಪು ಕೂಡ ಒಂದು ಅಮೂಲ್ಯ ಜೀವವನ್ನು ಕಳೆದುಕೊಳ್ಳುವಂತೆ ಮಾಡಬಹುದು.  ತಡೆಯಲು ವಿದ್ಯಾರ್ಥಿಗಳು ಬಾಲ್ಯದಿಂದಲೇ ರಸ್ತೆ ಸುರಕ್ಷತಾ ನಿಯಮಗಳನ್ನು ಕಲಿಯಬೇಕು ಮತ್ತು ಪಾಲಿಸಬೇಕು.

 ರಸ್ತೆ ದಾಟುವಾಗ ಜೀಬ್ರಾ ಕ್ರಾಸ್ ಬಳಸಬೇಕು, ಹೆಲೆಟ್ ಮತ್ತು ಸೀಟ್ ಬೆಲ್ಟ್ ಧರಿಸಬೇಕು. ಅತಿವೇಗ ತಪ್ಪಿಸಬೇಕು ಮತ್ತು ಕಾನೂನುಬದ್ಧ ವಯಸ್ಸು ತಲುಪಿದ ನಂತರವೇ ವಾಹನ ಚಾಲನೆ ಮಾಡಬೇಕು. ಸಂಚಾರ ನಿಯಮಗಳನ್ನು ಪಾಲಿಸಿ ಜಾಗರೂಕತೆಯಿಂದ ನಡೆದುಕೊಂಡರೆ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಬಹುದು ಮತ್ತು ಅಮೂಲ್ಯ ಜೀವಗಳನ್ನು ಉಳಿಸಬಹುದು ಎಂದು  ತಿಳಿಸಿದರು.

ಪ್ರಶ್ನೆಗಳನ್ನು ಕೇಳಿ ಉತ್ತರ ನೀಡಿದ ಮಕ್ಕಳಿಗೆ  ಮೋಕ್ಷ ಗೊಂಡಮ್ ವಿಶ್ವೇಶ್ವರಯ್ಯ ಶಾಲೆಯ ಕಾರ್ಯದರ್ಶಿ ಹೆಚ್.ಎಂ ಬಸವರಾಜ್‌ ಬಹುಮಾನ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಕಾರ್ಯದರ್ಶಿ  ಹೆಚ್.ಎಂ.ಬಸವರಾಜ್, ನಿರ್ದೇಶಕ ಕೆ.ಆರ್.ವೀರಭದ್ರಯ್ಯ, ಅಧಿಕಾರಿಗಳಾದ ಚಿತ್ರದುರ್ಗ ಭರತ್ ಎಂ ಕಾಳೆಸಿಂಗೆ, ಹಿರಿಯ ಮೋಟರ್ ವಾಹನ ನಿರೀಕ್ಷಕ ಮಹಂತೇಶ್, ವಕೀಲರ ಸಂಘ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ, ಸಹಾಯಕ ಕಾನೂನು ನೆರವು, ಅಭಿರಕ್ಷಕ ಸೋಮ ಕೆ.ಆರ್, ವಕೀಲರ ಸಂಘ ಉಪಾಧ್ಯಕ್ಷೆ ಎಂ ಕಲಾವತಿ, ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ವಕೀಲರ ಸಂಘ ಜಂಟಿ ಕಾರ್ಯದರ್ಶಿ ಹೆಚ್ ವಿ ಅಜಯ್, ವಕೀಲರ ಸಂಘ ಸಂಪನ್ಮೂಲ ವ್ಯಕ್ತಿ ಎಸ್.ಶೇಷಾದ್ರಿ, ಮುಖ್ಯ ಶಿಕ್ಷಕ ಜಿ.ತಿಪ್ಪೇಸ್ವಾಮಿ, ಹಿರಿಯ ಶಿಕ್ಷಕಿ ಪದ್ಮಜಾ ಹಾಗೂ ಇತರೆ ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

 

Share This Article
error: Content is protected !!
";