ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಸಾರ್ವಜನಿಕರಲ್ಲಿ ಪುಸ್ತಕ ಓದುವ ಹವ್ಯಾಸ ತುಂಬಾ ಕಡಿಮೆಯಾಗುತ್ತಿದೆ ಜೊತೆಗೆ ಎಐ ಎಂಬ ತಂತ್ರಜ್ಞಾನದಿಂದಾಗಿ ಮಕ್ಕಳು ಅದರ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಉಪ ಸಬಾಪತಿ ಹಾಲಿ ಸದಸ್ಯ ಪುಟ್ಟಣ್ಣ ಹೇಳಿದರು.
ನಗರದ ಕನ್ನಡ ಜಾಗೃತ ಭವನದಲ್ಲಿ ಶಿಕ್ಷಕ ವಿ. ಶಿವರಾಜ್ ಬರೆದಿರುವ ಬೆಳಕಿನೆಡೆಗೆ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ತರಗತಿಗಳಲ್ಲಿ ಸ್ಮಾರ್ಟ್ ಕ್ಲಾಸ್ ತಂತ್ರಜ್ಞಾನದಿಂದಾಗಿ ಮುಂದಿನ ದಿನಗಳಲ್ಲಿ ಶಿಕ್ಷಕರ ಅವಶ್ಯಕತೆಯೇ ಇಲ್ಲದಂತಹ ವಾತಾವರಣ ನಿರ್ಮಾಣವಾಗುವ ಆತಂಕ ಎದುರಾಗಿದೆ.ಶಿಕ್ಷಕರು ಉಪನ್ಯಾಸಕರು ಮಕ್ಕಳ ಎದುರಿಗೆ ನಿಂತು ಪಾಠ ಮಾಡುವ ವ್ಯವಸ್ಥೆಯೇ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಆದುದರಿಂದ ಇಂತಹ ಪುಸ್ತಕ ಬರೆಯುವ ಶಿಕ್ಷಕರಿಗೆ ಪ್ರೋತ್ಸಾಹ ಬೆಂಬಲ ತುಂಬಾ ಅಗತ್ಯವಾಗಿದೆ.ಶಿವರಾಜ್ ರವರ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸುವಂತಹುದು. ಇವರ ಬರಹದ ಮತ್ತಷ್ಟುಪುಸ್ತಕಗಳು ಹೊರಬರಲಿ. ಇದಕ್ಕೆ ಎಲ್ಲಾರು ಬೆಂಬಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಕೊಂಗಾಡಿಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮೇಜರ್ ಎಸ್ ಮಹಾಬಲೇಶ್ವರ್ ಮಾತನಾಡಿ ನನ್ನ ಶಿಷ್ಯ ಪುಸ್ತಕ ಬರೆದಿರುವುದು ತುಂಬಾ ಹೆಮ್ಮೆಯ ವಿಷಯ ನಾನು ಇಲ್ಲಿಯವರೆಗೂ ಯಾವುದೇ ತಂತ್ರಜ್ಞಾನ ಬಳಸದೆ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದೇನೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಬರುತ್ತಿರುವುದು ಉಪನ್ಯಾಸಕರಾದ ನಮಗೆ ಹೆಮ್ಮೆಯ ವಿಷಯ. ಇಂತಹ ಲೇಖಕರಿಗೆ ಶಿಕ್ಷಕರಿಗೆ ಬರಹಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಾವೆಲ್ಲರೂ ಪುಸ್ತಕ ವನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಉಪನಿರ್ದೇಶಕರಾದ ಗಂಗಮಾರೇಗೌಡರವರು ವಹಿಸಿದ್ದರು.ಕಾರ್ಯಕ್ರಮದಲ್ಲಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ರಂಗಪ್ಪ,ನಿವೃತ್ತ ಉಪನ್ಯಾಸಕರಾದ ಚಂದ್ರಪ್ಪ, ಕಸಾಪ ಜಿಲ್ಲಾಧ್ಯಕ್ಷ ಬಿ ಎನ್ ಕೃಷ್ಣಪ್ಪ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಯಕುಮಾರ್, ಉಪಪ್ರಾಂಶುಪಾಲರಾದ ದಾಕ್ಷಾಯಿಣಿ,ಕನ್ನಡ ಹೋರಾಟಗಾರ ಬಿ ಎಸ್ ಚಂದ್ರಶೇಖರ್, ಲಾವಣ್ಯ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಂ. ಸಿ. ಮಂಜುನಾಥ್, ಹಿರಿಯ ಶಿಕ್ಷಕರಾದ ಶಿವಪ್ರಸಾದ್,ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ. ಗೋವಿಂದರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಾಸು,ಮಾಳವನಾರಾಯಣ್, ಲೇಖಕ ವಿ ಶಿವರಾಜ್, ರೋಜಿಪುರ ಶ್ರೀನಿವಾಸ್ ಸೇರಿದಂತೆ ದೊಡ್ಡಬಳ್ಳಾಪುರ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

