ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು- ತಹಶೀಲ್ದಾರ್ ನೇತ್ರಾವತಿ

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ :
ಪಟ್ಟಣದ ಮಹದೇವ ಮೈಲಾರ ಕ್ರೀಡಾಂಗಣ ಆವರಣದಲ್ಲಿ ಆಯೋಜಿಸಿದ ಶಿಕ್ಷಕರ ದಿನಾಚರಣೆ ಹಾಗೂ ಸರ್ವಪಲ್ಲಿ ರಾಧಾಕೃಷ್ಣ ರವರ ಜಯಂತೋತ್ಸವ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕೂಡ್ಲಿಗಿ ಶಾಸಕ ಶ್ರೀನಿವಾಸ್ ಎನ್ ಟಿ ರವರು ಉದ್ಘಾಟಿಸಿ ಮಾತನಾಡಿ ನಾನು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವೆ ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಯಾವುದೇ ಜಾತಿ ಭೇದ ಭಾವವಿಲ್ಲದೆ ಆಟದ ಜೊತೆ ಪಾಠ ಕಲಿಸಿ ಎಂದರು.

ತಹಶೀಲ್ದಾರ್ ನೇತ್ರಾವತಿ ಮಾತನಾಡಿ ನಾನು ತಹಶೀಲ್ದಾರ್ ಉದ್ಯೋಗದಲ್ಲಿದ್ದೀನಿ ಎಂದರೆ ನನಗೆ ಗುರುಗಳು ನೀಡಿದ ಶಿಕ್ಷಣ. ಆದ್ದರಿಂದ ಶಿಕ್ಷಕರು ಶಾಸಕರು ಈಗಾಗಲೇ ತಿಳಿಸಿದ ಹಾಗೆ ಮಕ್ಕಳನ್ನು ದೊಡ್ಡ ಆಸ್ತಿಯನ್ನಾಗಿ ಮಾಡುವುದು ನಿಮ್ಮ ಕೈಯಲ್ಲಿದೆ ಎಂದು ಹೇಳಿದರು.

- Advertisement - 

 ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿ ನಾಗರಾಜ್,  ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ, ಎಸ್ ಡಿ ಎಂ ಸಿ ಅಧ್ಯಕ್ಷ ದುರ್ಗದಾಸ್ ನಾಯಕ, ಎಸ್ ಡಿ ಎಂ ಸಿ ಸದಸ್ಯರು, ಪಟ್ಟಣ ಪಂಚಾಯಿತಿ ಸದಸ್ಯರು, ಕರಡಿಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ನಾಗರಾಜ್ ಆಚಾರಿ, ಸಹಶಿಕ್ಷಕರಾದ ಸರೋಜಮ್ಮ ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.

 

- Advertisement - 

Share This Article
error: Content is protected !!
";