ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರಾಜ್ಯದ ಎಲ್ಲಾ ಉಪ ನೊಂದಣಿ ಕಚೇರಿಗಳು ಮಾ.೨೮ ಮತ್ತು ೨೯ ರಂದು ಸರ್ಕಾರಿ ರಜಾ ದಿನಗಳಂದು ಕರ್ತವ್ಯ ನಿರ್ವಹಿಸುವಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಅದರಂತೆ ಚಿತ್ರದುರ್ಗ ಉಪ ನೊಂದಣಾಧಿಕಾರಿಗಳ ಕಚೇರಿ ಶನಿವಾರ ಮತ್ತು ಭಾನುವಾರದಂದು ಎಂದಿನಂತೆ ತೆರೆದಿರುತ್ತದೆ.
ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳುವಂತೆ ನೊಂದಣಿ ಮತ್ತು ಮುದ್ರಾಂಕ ಇಲಾಖೆಯ ನೊಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ತಿಳಿಸಿದ್ದಾರೆ.

