ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ವಿರುದ್ಧ ಪೊಲೀಸರು ಕೋರ್ಟ್ಗೆ ೪,೫೦೦ ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಕೆ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಕ್ಕ ಸಾಕ್ಷ್ಯಧಾರಗಳ ಮೇಲೆ ಪೊಲೀಸರು ನಟ ದರ್ಶನ್‌ನನ್ನು ಎ೨ನಿಂದ ಎ೧ ಆರೋಪಿಗೆ ಬಡ್ತಿ ನೀಡುತ್ತಾರೆ ಎನ್ನಲಾಗಿತ್ತು.
ಆದರೆ ಇದೀಗ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರರಣದಲ್ಲಿ ಪೊಲೀಸರು ಸುಮಾರು ೪,೫೦೦ ಪುಟಗಳಿಗೂ ಅಧಿಕ ಚಾರ್ಜ್ಶೀಟ್ ಅನ್ನು ಇಂದು (ಸೆಪ್ಟೆಂಬರ್ ೪) ಬೆಳಗ್ಗೆ ಬೆಂಗಳೂರಿನ ೨೪ನೇ ಎಸಿಎಂಎ ಕೋರ್ಟ್ಗೆ ಸಲ್ಲಿಸಿದ್ದಾರೆ.ಈ ಪ್ರಕರಣದಲ್ಲಿ ನಟ ದರ್ಶನ್ ಎ೨ ಆರೋಪಿ ಆಗಿದ್ದರೆ, ಪವಿತ್ರಾ ಗೌಡ ಎ೧ ಆರೋಪಿ ಆಗಿದ್ದರು. ಇದನ್ನು ಚಾರ್ಜ್ ಶೀಟ್‌ನಲ್ಲಿ ದರ್ಶನ್ ಎ೧ ಹಗೂ ಪವಿತ್ರಾ ಎ೨ ಬದಲಾವಣೆ ಆಗಬಹುದು ಎಂದು ಅಂದಾಜಿತ್ತು.
ಆದರೆ, ಯಾವುದೇ ಬದಲಾವಣೆ ಆಗಿಲ್ಲ. ಎಸಿಪಿ ಚಂದನ್ ಕುಮಾರ್ ಹಾಗೂ ತನಿಖಾ ತಂಡ ದರ್ಶನ್‌ನನ್ನು ಎರಡನೇ ಆರೋಪಿಯಾಗಿ ಉಲ್ಲೇಖ ಮಾಡಿದ್ದು, ಪವಿತ್ರಾ ಅವರು ಎ೧ ಆರೋಪಿಯಾಗಿಯೇ ಮುಂದುವರೆದಿದ್ದಾರೆ.ಮತ್ತೊAದೆಡೆ ಪ್ರಕರಣ ತನಿಖೆ ಇನ್ನೂ ಪೂರ್ಣ ಆಗಿಲ್ಲ. ಆದ್ದರಿಂದ ಸಿಆರ್ಪಿಸಿ ೧೭೩(೮) ಅಡಿಯಲ್ಲಿ ಪ್ರಿಲಿಮಿನರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದ್ದು, ಈ ಬಗ್ಗೆ ವಿಶೇಷ ಕೋರ್ಟ್ಗೆ ಪೊಲೀಸರು ಮನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಮುಖಾಂಶಗಳ ವಿವರನಟ ದರ್ಶನ್ ಸೇರಿ ೧೭ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.೩ ಪ್ರತ್ಯಕ್ಷ ಸಾಕ್ಷಿಗಳು ಇವೆ.ಎಫ್ಎಸ್ಎಲ್ ಮಾತ್ತು ಸಿಎಫ್ಎಸ್ಎಲ್ನಿಂದ ೮ ವರದಿಗಳು ಇವೆ.ಒಟ್ಟು ೨೦೦ಕ್ಕೂ ಅಧಿಕಾ ಸಾಕ್ಷಿಗಳು ಇವೆ.ಕಿಡ್ನಾಪ್, ಹಲ್ಲೆ, ಕೊಲೆ ಬಳಿಕ ಮುಚ್ಚಿಹಾಕಲು ೩೦ ಲಕ್ಷ ರೂಪಾಯಿ ನೀಡಿದ್ದು ದರ್ಶನ್ ಎಂದು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ದರ್ಶನ್ ಬಟ್ಟೆ ಮತ್ತು ಶೂನಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಇರುವುದು ಪತ್ತೆಯಾಗಿದ್ದು, ಇದರಿಂದ ದರ್ಶನ್ ಹಲ್ಲೆ ಮಾಡಿರುವ ಬಗ್ಗೆ ಮತ್ತು ಕೊಲೆಯಲ್ಲಿ ಭಾಗಿಯಾದ ಬಗ್ಗೆ ಮಾಹಿತಿ ದೊರೆದಂತಾಗಿದೆ. ಹಲ್ಲೆ ನಡೆಯುವ ಸ್ಥಳದಲ್ಲಿ ಪವಿತ್ರಾ ಗೌಡ & ದರ್ಶನ್ ಹಾಜರಿದ್ದು, ಈ ವೇಳೆ ಪವಿತ್ರಾ ಗೌಡ ರೇಣುಕಾಸ್ವಾಮಿ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಕೃತ್ಯ ನಡೆದ ಸಮಯದಲ್ಲಿ ಇವರಿಬ್ಬರ ಮೊಬೈಲ್ ಲೋಕೇಶನ್ ಕೂಡ ಲಭ್ಯವಾಗಿದೆ.