ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯ್ತಿ ಚುನಾವಣೆಗೆ 5ನೇ ವಾರ್ಡ್ ವರದನಹಳ್ಳಿ ಪೂರ್ವ ಪರಿಶಿಷ್ಠ ಜಾತಿ ವರ್ಗಕ್ಕೆ ಮೀಸಲಾದ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಮುನೀಂದ್ರ ಸಿ ರವರು ಬೆಂಬಲಿಗರೊಂದಿಗೆ ಭಾಶೆಟ್ಟಿಹಳ್ಳಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು.
ನಂತರ ಸುದ್ಧಿಗಾರರೊಂದಿಗೆ ಅವರು ಮಾತನಾಡಿ ಐದನೇ ವಾರ್ಡ್ ವರದನಹಳ್ಳಿ ಪೂರ್ವ ಪರಿಶಿಷ್ಠ ಜಾತಿ ವರ್ಗಕ್ಕೆ ಮೀಸಲಾಗಿದ್ದು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿ ಯಾಗಿ ಮಾರ್ಪಟ್ಟಿದೆ.
ಈ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದು, ಇಷ್ಟು ದಿನ ಜನ ಪ್ರತಿನಿದಿಗಳಿಲ್ಲದ ಕಾರಣ ವರದನಹಳ್ಳಿ ಈ ಬಾಗದ ಪ್ರದೇಶಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ನಾನು ಈ ಭಾಗದಲ್ಲಿ ಚಿರಪರಿಚಿತನಾಗಿದ್ದು ಸ್ಥಳೀಯ ಜನರೇ ನನ್ನನ್ನು ಪ್ರೋತ್ಸಾಹಿಸಿ ಚುನಾವಣೆಗೆ ನಿಲ್ಲಿಸಿದ್ದಾರೆ.
ಜನ ಸಾಮಾನ್ಯರ ಅಪೇಕ್ಷೆಯಂತೆ ಪೂರಕವಾಗಿ ಕೆಲಸ ಮಾಡುವ ಗುರಿ ಹೊಂದಿದ್ದೇನೆ. ವಾರ್ಡಿನೆಲ್ಲೆಡೆ ನನಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿ ಜಯಗಳಿಸುವ ವಿಶ್ವಾಸವಿದೆ ಎಂದು ಮುನೀಂದ್ರ ಹೇಳಿದರು.

