ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬ್ರಹ್ಮರಥೋತ್ಸವ ಪ್ರಯುಕ್ತ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಶ್ರೀ ನರಸಿಂಹ ಸ್ವಾಮಿ ಅವರನ್ನು ರಾಜಭೀದಿಯಲ್ಲಿ ಮೆರವಣಿಗೆ ಮಾಡಲಾಯಿತು.
ಈ ಮೆರವಣಿಗೆಯಲ್ಲಿ ದೇವಾಲಯದ ಕಾರ್ಯದರ್ಶಿ ಹಾಗೂ ಉಪಯುಕ್ತರು ಪಿ. ದಿನೇಶ್ ಮುಜರಾಯಿ ಇಲಾಖೆ ತಹಶೀಲ್ದಾರ್ ಜಿ.ಜೆ ಹೇಮಾವತಿ,ಉಪತಹಸಿಲ್ದಾರ್ ಪ್ರಮೋದ್,
ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರುಗಳಾದ ಜೆ.ಎನ್ ರಂಗಪ್ಪ, ಎಸ್. ರವಿ, ಲಕ್ಷ್ಮ ನಾಯಕ್,ಆರ್. ವಿ ಮಹೇಶ್ ಕುಮಾರ್, ಹೇಮಾವತಿ, ರಮೇಶ್, ಪ್ರಧಾನ ಅರ್ಚಕರು ಶ್ರೀನಿಧಿ, ದೇವಾಲಯದ ಪ್ರಮುಖ, ನಂಜಪ್ಪ ಹಾಗೂ ಅರ್ಚಕ ವೃಂದದವರು ಹಾಗು ದೇವಾಲಯದ ಸಿಬ್ಬಂದಿ ಭಾಗವಹಿಸಿದ್ದರು. ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದಲ್ಲಿ ಸ್ವಾಮಿಯ ರಾಜ ಭೀದಿ ಮೆರವಣಿಗೆ ಉತ್ಸವ.

