ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಜಿಲ್ಲಾ ಮಟ್ಟದ ಯೋಗ ಒಲಂಪಿಕ್ಸ್ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವ ಶ್ರೀ ಕೊಂಗಾಡಿಯಪ್ಪ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಎ ಜಿ ಯಶಸ್ವಿನಿ ಜೂ 4 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಯೋಗ ಒಲಂಪಿಕ್ ಕ್ರೀಡೆಗೆ ಆಯ್ಕೆಯಾಗಿದ್ದಾರೆ.
ಯೋಗ ಒಲಿಂಪಿಕ್ಸ್ ಕ್ರೀಡೆಗೆ ಆಯ್ಕೆ ಯಾಗಿರುವ ವಿದ್ಯಾರ್ಥಿ ಎ ಜಿ ಯಶಸ್ವಿನಿ ಅವರನ್ನು ಶಾಲಾ ಮುಖ್ಯೋಪಾಧ್ಯಾಯರು, ಯೋಗ ಶಿಕ್ಷಕರಾದ ಎಚ್ಎಸ್ ರಾಮಕೃಷ್ಣ ಹಾಗೂ ಊರಿನ ಹಿರಿಯರು ಶುಭ ಕೋರಿದ್ದಾರೆ.