ಪೊಲೀಸರ ಯಶಸ್ವಿ ಕಾರ್ಯಾಚರಣೆ 2.16 ಕೋಟಿ ಹಣ ಸೇಫ್

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ಯಶಸ್ವಿ ಕಾರ್ಯಾಚರಣೆಯಿಂದಾಗಿ ಇ-ಮೇಲ್ ಸ್ಪೂಫಿಂಗ್ ಮೂಲಕ ವಂಚಕರ ಪಾಲಾಗಿದ್ದ
2.16 ಕೋಟಿ ಹಣವನ್ನು ಸಂಪೂರ್ಣವಾಗಿ ಹಿಂಪಡೆದು, ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಪೊಲೀಸರು ಗೋಲ್ಡನ್ ಅವರ್‌ನಲ್ಲಿ ತ್ವರಿತ ಕಾರ್ಯಾಚರಣೆ ಕೈಗೊಂಡು ಹಣ ಹಿಂಪಡೆದಿದ್ದು ಇದು ದೇಶದಲ್ಲೇ ಮೊದಲ ಗರಿಷ್ಠ ಮೊತ್ತದ ರಿಕವರಿ ಹಣವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಹೈದರಾಬಾದ್ ಮೂಲದ ಔಷಧ ತಯಾರಿಕಾ ಕಂಪನಿ ರೆಡ್ಡೀಸ್ ಲ್ಯಾಬೋರೇಟರೀಸ್ ಜತೆ ಗ್ರೂಪ್ ಫಾರ್ಮಾ ಹೆಸರಿನ‌ಕಂಪನಿಯೊಂದು ವ್ಯವಹಾರ ಹೊಂದಿತ್ತು.

- Advertisement - 

ನೈಜೀರಿಯಾದಲ್ಲಿ ಕುಳಿತು ಕಳೆದ ವರ್ಷ ಫೆಬ್ರವರಿಯಲ್ಲಿ ಗ್ರೂಪ್ ಫಾರ್ಮಾ ಕಂಪನಿಯ ಹೆಸರಿನಲ್ಲಿ ನಕಲಿ ಮೇಲ್ ಖಾತೆ ತೆರೆದಿದ್ದ ವಂಚಕರು, ರೆಡ್ಡೀಸ್ ಲ್ಯಾಬೋರೇಟರೀಸ್ ಜತೆ ಸಂಪರ್ಕ ಸಾಧಿಸಿದ್ದರು. ಅಸಲಿ ಮೇಲ್ ಐಡಿಯಿಂದ ಬಂದಿರಬಹುದು ಎಂದು ನಂಬಿದ್ದ ರೆಡ್ಡೀಸ್ ಲ್ಯಾಬೋರೇಟರೀಸ್, ವಂಚಕರು ಸೂಚಿಸಿದ್ದ ಖಾತೆಗೆ 2.16 ಕೋಟಿ ರೂಪಾಯಿ ಪಾವತಿಸಿದ್ದರು. ಆದರೆ ಆ ಹಣ ನಕಲಿ ಬ್ಯಾಂಕ್ ಖಾತೆಗೆ ಜಮೆಯಾಗಿರುವುದು ನಂತರ ಬಯಲಾಗಿತ್ತು.

ಕೂಡಲೇ ಗೋಲ್ಡನ್ ಅವರ್ ಅವಧಿಯೊಳಗೆ ಗ್ರೂಪ್ ಫಾರ್ಮಾದ ಪ್ರತಿನಿಧಿಗಳು ಸಿಸಿಬಿಯ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಕೂಡಲೇ ಎಚ್ಚೆತ್ತು, ಹಣ ಸಂದಾಯವಾಗಿದ್ದ ಗುಜರಾತ್ ಮೂಲದ ಬ್ಯಾಂಕ್ ಖಾತೆ ಫ್ರೀಜ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಸದ್ಯ ಸಂಪೂರ್ಣವಾಗಿ 2.16 ಕೋಟಿ ರೂಪಾಯಿ ಹಣ ವಾಪಸ್ ಹಿಂದಿರುಗಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement - 

ಏನಿದು ಗೋಲ್ಡನ್ ಅವರ್:
ಯಾವುದೇ ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್, ಗಿಫ್ಟ್ ಆಫರ್, ಕ್ರೆಡಿಟ್ ಕಾರ್ಡ್ ಪಾಸ್‌ ವರ್ಡ್ ಚೇಂಜ್, ಕೆವೈಸಿ ಅಪ್ಡೇಟ್ ಸೋಗಿನಲ್ಲಿ ಎಸ್ಎಂಎಸ್ ಅಥವಾ ಕರೆಗಳ ಮೂಲಕ ಹಣ ದೋಚುತ್ತಾರೆ.

ವಂಚನೆಗೊಳಗಾದವರು ಅಂಥ ಸಂದರ್ಭಗಳಲ್ಲಿ ಒಂದು ಗಂಟೆಯ ಅವಧಿಯನ್ನು ಗೋಲ್ಡನ್ ಅವರ್ಎನ್ನಲಾಗುತ್ತದೆ. ಗೋಲ್ಡನ್ ಅವರ್ ಅವಧಿಯಲ್ಲಿ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ 1930ಗೆ ಕರೆ ಮಾಡಿ ಮಾಹಿತಿ ನೀಡುವುದರಿಂದ ಅಥವಾ ಪೊಲೀಸ್ ಠಾಣೆಗೆ ದೂರು ನೀಡುವುದರಿಂದ ಕೆಲವೇ ನಿಮಿಷಗಳಲ್ಲಿ ಆ ಮಾಹಿತಿ ಆಧರಿಸಿ ಹಣ ವರ್ಗಾವಣೆಯಾದ ಖಾತೆ ಅಥವಾ ವ್ಯಾಲೆಟ್‌ಪತ್ತೆ ಹಚ್ಚಿ ಅದರಲ್ಲಿರುವ ಹಣ ತಡೆಹಿಡಿಯುವ ಅವಕಾಶ ಹೆಚ್ಚಿರುತ್ತದೆ. ಮತ್ತು ತನಿಖಾ ಸಂಸ್ಥೆಗಳು ತ್ವರಿತವಾಗಿ ವಂಚಕರ ಖಾತೆಯನ್ನು ಪತ್ತೆ ಹಚ್ಚಿ, ಸ್ಥಗಿತಗೊಳಿಸಲು ಸಾಧ್ಯವಾಗುತ್ತದೆ.

 

Share This Article
error: Content is protected !!
";