ಚಂದ್ರವಳ್ಳಿ ನ್ಯೂಸ್, ಹೊಸಪೇಟೆ(ವಿಜಯನಗರ):
ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ನಿ,. ಅಧ್ಯಕ್ಷರಾಗಿ ಬಾಣದ ಸುದರ್ಶನ್ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್. ಲೀಲಾವತಿ ತಿಳಿಸಿದರು.
ನೂತನ ಅಧ್ಯಕ್ಷರಾಗಿ ಬಾಣದ ಸುದರ್ಶನ್ ನಾಯಕ ಅಧಿಕಾರವನ್ನು ಸ್ವೀಕರಿಸಿ ಮಾತನಾಡಿ, ಅಧಿಕಾರ ಎಂದಿಗೂ ಶಾಶ್ವತವಲ್ಲ, ಎಷ್ಟು ದಿನಗಳ ಕಾಲ ಅಧಿಕಾರದಲ್ಲಿದ್ದೆ ಎನ್ನುವುದಕ್ಕಿಂತ ಮುಖ್ಯವಾಗಿ ಎಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತೇನೆ. ಸಂಘದಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು.
ಜತೆಗೆ ಸಹಕಾರ ಸಂಘದ ಅಭಿವೃದ್ಧಿಗೆ ಕೈಜೋಡಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀ ಬಂಡೆ ರಂಗಪ್ಪ ಮತ್ತು ನಿರ್ದೇಶಕರು ವಿ .ಆರ್. ಸಂದೀಪ್ ಸಿಂಗ್ ಕೆ .ತಿಪ್ಪೇರುದ್ರ ಕೆ. ಹನುಮಂತಪ್ಪ ಎಲ್. ಸಿದ್ದರಾಮಯ್ಯ ಜಿ. ಬಸವರಾಜ್ ಎಸ್. ಕಳಕಪ್ಪ ಕೋಳಿ. ಬಸವರಾಜ್ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಇನ್ನು ಮುಂತಾದವರು ಇದ್ದರು.