ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿಂದೆ ‘ಮಂಗಳಸೂತ್ರ‘ ಕಸಿದುಕೊಳ್ಳುತ್ತಾರೆ ಎಂಬ ಕಥೆ ಕಟ್ಟಿದ್ದ ಮೋದಿಯವರ ಆಡಳಿತದಲ್ಲೇ ಅಡವಿಟ್ಟ ಚಿನ್ನಕ್ಕೆ ಬಡ್ಡಿ ಕಟ್ಟಲಾಗದೆ ಜನ ತಮ್ಮ ಶ್ರಮದ ದುಡಿಮೆಯಿಂದ ಕೊಂಡ ಚಿನ್ನಾಭರಣ ಕಳೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
ದೇಶದಲ್ಲಿ ಅಡವಿಟ್ಟ ಚಿನ್ನಕ್ಕೆ ಬಡ್ಡಿ ಕಟ್ಟಲಾಗದ ಗ್ರಾಹಕರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದೆ. ನಿರಂತರ ಬೆಲೆ ಏರಿಕೆ, ಹಾಗೂ ಆರ್ಥಿಕ ಮುಗ್ಗಟ್ಟು, ನಿರುದ್ಯೋಗದಿಂದಾಗಿ ಚಿನ್ನ ಅಡವಿಟ್ಟ 30%ರಷ್ಟು ಪ್ರಕರಣಗಳಲ್ಲಿ ಸಾಲ ತೀರಿಸಲಾಗುತ್ತಿಲ್ಲ. ಇದರಿಂದ ಮಂಗಳಸೂತ್ರ ಮತ್ತಿತರ ಭಾವನಾತ್ಮಕ ಆಭರಣಗಳನ್ನೂ ಮಹಿಳೆಯರು ಕಳೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.
ತಮ್ಮ ಶ್ರೀಮಂತ ಗೆಳೆಯರಿಗಷ್ಟೇ ‘ಅಚ್ಚೇ ದಿನ‘ ತಂದುಕೊಟ್ಟ ಪ್ರಧಾನಿ ಮೋದಿ ಉಳಿದವರಿಂದ ಎಲ್ಲವನ್ನೂ ಕಸಿದುಕೊಳ್ಳುತ್ತಿದ್ದಾರೆ! ಎಂದು ಮೋದಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.