ಚಂದ್ರವಳ್ಳಿ ನ್ಯೂಸ್, ಮೈಸೂರು:
ಮೈಸೂರು ನಗರದ ಉದಯಗಿರಿ ಪೊಲೀಸ್‌ಠಾಣೆ ಮೇಲೆ ದಿಢೀರ್ ಕಲ್ಲು ತೂರಾಟ ಮಾಡಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಆರೋಪದ ಮೇಲೆ ಮೂವರು ಪೊಲೀಸರನ್ನು ನಗರ ಪೊಲೀಸ್‌ಆಯುಕ್ತೆ ಸೀಮಾ ಲಾಟ್ಕರ್‌ಆದೇಶ ಹೊರಡಿಸಿದ್ದಾರೆ.
ಉದಯಗಿರಿ ಠಾಣೆ ಎಸ್‌ಐ ರೂಪೇಶ್, ಗುಪ್ತಚರ ಹೆಡ್ ಕಾನ್ಸ್ಟೇಬಲ್ ಪ್ರಕಾಶ್‌ಹಾಗೂ ಸಾಮಾಜಿಕ ಜಾಲತಾಣ ನಿರ್ವಹಣೆ(ನಿಗಾ) ಜವಾಬ್ದಾರಿ ಹೊತ್ತಿದ್ದ ಕಾನ್ಸ್ಟೇಬಲ್ ಸಂತೋಷ್‌ಇವರುಗಳನ್ನು ಪೊಲೀಸ್‌ಆಯುಕ್ತರು ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ.
ಅವಹೇಳನಕಾರಿ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಹಾಕಿದ್ದ ಆರೋಪಿಯನ್ನು ಬೆಳಗ್ಗೆ ಠಾಣೆಗೆ ಕರೆ ತಂದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪೊಲೀಸ್ ಠಾಣೆಯ ಅಧಿಕಾರಿಗಳು ಒಂದಿಷ್ಟು ಎಚ್ಚರವಹಿಸಿದ್ದರೆ ಗಲಭೆ ತಡೆಯಲು ಅವಕಾಶ ಇದ್ದರೂ ಎಸ್‌ಐ ನಿರ್ಲಕ್ಷ್ಯದಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಹೀಗಾಗಿ, ಪೊಲೀಸರ ಕರ್ತವ್ಯ ಲೋಪದಿಂದ ಪರಿಸ್ಥಿತಿ ಉದ್ವಿಗ್ನಗೊಂಡು ಅನಾಹುತ ಸಂಭವಿಸಿತು ಎನ್ನುವ ಆರೋಪ ಹಿನ್ನೆಲೆಯಲ್ಲಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಉದಯಗಿರಿ ಗಲಾಟೆ ಬಳಿಕ ಎಸ್ಐ ರೂಪೇಶ್‌ಅವರನ್ನು ಪೊಲೀಸ್‌ಆಯುಕ್ತರ ಕಚೇರಿಯಲ್ಲಿರುವ ಆಟೋಮೇಷನ್‌ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿತ್ತು. ಆಟೋಮೇಷನ್‌ಕೇಂದ್ರಕ್ಕೆ ವರ್ಗಾವಣೆಯಾಗಿದ್ದ ರೂಪೇಶ್ ಸೇರಿದಂತೆ ಮೂವರು ಅಮಾನತುಗೊಂಡಿದ್ದಾರೆ. ಘಟನೆ ನಡೆದು ಒಂದೂವರೆ ತಿಂಗಳ ಬಳಿಕ ನಗರ ಪೊಲೀಸ್‌ಆಯುಕ್ತೆ ಸೀಮಾ ಲಾಟ್ಕರ್‌ಅಮಾನತು ಆದೇಶ ಹೊರಡಿಸಿದ್ದಾರೆ.