ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಎಲೆಮರೆಯ ಕಾಯಿಯಂತೆ ಸಮಾಜಕ್ಕೆ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕಿದೆ ಎಂದು ಚಳ್ಳಕೆರೆ ತಾಲೂಕು ಇನ್ನರ್ ವೀಲ್ ಸಂಸ್ಥೆಯ ಮಹಿಳಾ ಮಣಿಗಳ ಅಧ್ಯಕ್ಷೆ ಸುಧಾ ಪ್ರಹ್ಲಾದ್ ಅಭಿಪ್ರಾಯಪಟ್ಟರು.
ತಾಲೂಕಿನ ಕಾಲುವೆಹಳ್ಳಿ ಗ್ರಾಮದ ಶತಾಯುಷಿ ಸೂಲಗಿತ್ತಿ ತಳುಕಿನ ತಿಮ್ಮಕ್ಕ ಮತ್ತು ಅವರ ಕುಟುಂಬಕ್ಕೆ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಆಹಾರ ಪದಾರ್ಥಗಳು, ಚೇರ್, ಹಾಸಿಗೆ- ಹೊದಿಕೆ, ಸೀರೆ ವಿತರಿಸಿ ಹಾಗೂ ಸನ್ಮಾನಿಸಿ ಅವರು ಮಾತನಾಡಿದರು.
ಇನ್ನರ್ ವೀಲ್ ಸಂಸ್ಥೆಯ ಖಜಾಂಚಿ ಪದ್ಮ ನಾಗರಾಜ್ ಮಾತನಾಡಿ ಶತಾಯುಷಿ ಸೂಲಗಿತ್ತಿ ತಳುಕಿನ ತಿಮ್ಮಕ್ಕನವರು ಐವತ್ತು ವರ್ಷಗಳ ಕಾಲ ಕಾಲುವೆಹಳ್ಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಉಚಿತ ಹೆರಿಗೆ ಮಾಡಿಸಿದರೂ ಅವರನ್ನು ಇಷ್ಟು ವರ್ಷಗಳ ಕಾಲ ಸಮಾಜದ ಜನರು ಗುರುತಿಸದೆ ಇದ್ದದ್ದು ಬಹಳ ಬೇಸರದ ವಿಷಯ. ಹೀಗಲಾದರೂ ಇನ್ನರ್ ವಿಲ್ ಸಂಸ್ಥೆಯ ಮೂಲಕ ಅವರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಬಹಳ ಸಂತೋಷ ತಂದಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಇನ್ನರ್ ವೀಲ್ ಸಂಸ್ಥೆಯ ಮೂಲಕ ಇನ್ನಷ್ಟು ನೆರವನ್ನು ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು, ಸದಸ್ಯರು ತಿಳಿಸಿದರು.
ಬೋರಣ್ಣ ಪ್ರಾರ್ಥಿಸಿದರು. ಯತೀಶ್ ಎಂ ಸಿದ್ದಾಪುರ ಸ್ವಾಗತಿಸಿ ವಂದಿಸಿದರು.
ಇನ್ನರ್ ವೀಲ್ ಸಂಸ್ಥೆಯ ನಾಗಶ್ರೀ ಶ್ರೀನಿಧಿ, ಅರುಣಾ ಸುಬ್ಬರಾಜ್, ಡಾ.ವಿದ್ಯಾ, ಚಂದ್ರಕಲಾ ಹನುಮಂತಪ್ಪ, ಮೀರಾ ರಮೇಶ್, ಸುಜಾತ, ಅನಿತಾ ಶಶಿಧರ್, ಸೌರಭಿ, ಮಲ್ಲಿಕಾರ್ಜುನ, ಬ್ರಹ್ಮ,ಪಾಲಕ್ಕ, ಯತೀಶ್ ಎಂ ಸಿದ್ದಾಪುರ, ಬೋರಣ್ಣ, ಮಂಜುಳ ಜಯಪಾಲ, ಗೌತಮಿ, ಮೌನಶ್ರೀ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.