ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಾತಿ ಭೇದವಿಲ್ಲದೆ ಸಮಾನತೆಯಿಂದ ನೋಡಿವೆ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು.
ನಗರಸಭೆಯ ನೂತನ ಅಧ್ಯಕ್ಷರಾಗಿ ಆರ್. ಬಾಲಕೃಷ್ಣ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ
ನಂತರ ಮಾತನಾಡಿ ಜನಪರ ಸೇವೆ ಅತ್ಯಮೂಲ್ಯವಾದದ್ದು ಉತ್ತಮ ರೀತಿಯಲ್ಲಿ ಜನಸೇವೆ ಮಾಡುವುದರ ಮೂಲಕ ನೀನು ಅಧ್ಯಕ್ಷರಾಗಿರುವುದು ಸ್ವಾರ್ಥಕವಾಗುತ್ತದೆ. ನಗರದ ಅಭಿವೃದ್ಧಿಗೆ ಸಮರ್ಪಿತ ಸೇವೆ ನೀಡುವಲ್ಲಿ ಸದಾ ಮುಂದಾಗಬೇಕೆಂದು ಆಶಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಸಣ್ಣಪ್ಪ, ಮಾಜಿ ಅಧ್ಯಕ್ಷೆ ಶಿವರಂಜಿನಿ ಯಾದವ್, ಅನಿಲ್ ಕುಮಾರ್, ಈರ ಲಿಂಗೇಗೌಡ, ಜೆ ಖಾದಿ ರಮೇಶ್, ಕಂದಿಕೆರೆ ಸುರೇಶ್ ಬಾಬು ಸಿಬ್ಬಂದಿ ವರ್ಗದವರು ಸ್ಥಳೀಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.