ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ವಿಕಾಸಸೌಧದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜು ಇವರೊಂದಿಗೆ ಹಿರಿಯೂರು ತಾಲ್ಲೂಕಿನ ಗಾಯತ್ರಿ ಜಲಾಶಯಕ್ಕೆ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಗಾಯತ್ರಿ ಜಲಾಶಯಕ್ಕೆ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿ ಸಂಬಂಧ ಸಣ್ಣ ನೀರಾವರಿ ಇಲಾಖೆಯ ಕೃಷ್ಣಾ ಕಣಿವೆಯಡಿ ಬರುವ ಕೆ-9 ಉಪ ಕಣಿವೆಯಡಿ ಹಂಚಿಕೆಯಾಗಿರುವ 26.80 ಟಿಎಂಸಿ ನೀರಿನಲ್ಲಿ ಗಾಯತ್ರಿ ಜಲಾಶಯಕ್ಕೆ 0.50 ಟಿ.ಎಂ.ಸಿ ಹಂಚಿಕೆ ಮಾಡುವ ಸಂಬಂಧದ ಸಭೆ ಕರೆಯಲಾಗಿತ್ತು.
ಸಭೆಗೆ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್ ಎಸ್., ಕೃಷ್ಣಾ ನ್ಯಾಯಾಧಿಕರಣ ಪ್ರಧಾನ ಸಲಹೆಗಾರ ಆರ್. ಚಲುವರಾಜ್, ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಸಣ್ಣ ನೀರಾವರಿ(ದಕ್ಷಿಣ) ಬೆಂಗಳೂರು ರವರು ಹಾಜರಿರುವಂತೆ ಹಾಗೂ ಸಭೆಯ ದಿನಾಂಕ ನಿಗದಿಪಡಿಸುವ ಸಂಬಂಧ ಚರ್ಚಿಸಲಾಯಿತು.
ಜವನಗೊಂಡನಹಳ್ಳಿ ಹೋಬಳಿ ಅತ್ಯಂತ ಬರ ಪೀಡಿತ ಮತ್ತು ಹಿಂದುಳಿದ ಪ್ರದೇಶವಾಗಿದ್ದು, ಈ ಹೋಬಳಿಯಲ್ಲಿನ ಕೆರೆಗಳು ಸಂಪೂರ್ಣವಾಗಿ ಬತ್ತಿಹೊಗಿದ್ದು, ಜನಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಮತ್ತು ಅಂತರ್ಜಲ ಮಟ್ಟ ಗಣನೀಯವಾಗಿ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಕೂನಿಕೆರೆ ಗ್ರಾಮದ ಬಳಿ ವೇದಾವತಿ ನದಿಯಿಂದ ಗಾಯಿತ್ರಿ ಜಲಾಶಯ ಹಾಗೂ ಇತರೆ 15 ಕೆರೆಗಳನ್ನು ತುಂಬಿಸುವ ಏತ ನೀರಾವತಿ ಯೋಜನೆ ಕಾಮಗಾರಿಗೆ 2025-26ನೇ ಸಾಲಿನ ರಾಜ್ಯ ಆಯವ್ಯಯ ಅಂದಾಜಿನಲ್ಲಿ 225 ಕೋಟಿಗಳ ಅನುದಾನ ಮೀಸಲಿರಿಸಿ, ಆಯವ್ಯಯದಲ್ಲಿ ಘೋಷಣೆ ಮಾಡಲು ಮನವರಿಕೆ ಮಾಡಿಕೊಡಲಾಯಿತು.
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿ ರೈತರು ನೀರಿಗಾಗಿ ನಡೆಸುತ್ತಿರುವ ಧರಣಿಯ ಬಗ್ಗೆ ಸಣ್ಣ ನೀರಾವರಿ ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು.
ಅದೇ ರೀತಿ ಹಿರಿಯೂರು ತಾಲ್ಲೂಕಿನ ಗಡಿಭಾಗದಲ್ಲಿ ಮತ್ತು ದೊಡ್ಡ ಹೋಬಳಿಯಾಗಿರುವ ಮತ್ತು ಮುಂದಿನ ದಿನಗಳಲ್ಲಿ ತಾಲ್ಲೂಕು ಕೇಂದ್ರವಾಗಲು ಅರ್ಹವಾಗಿರುವ ಧರ್ಮಪುರ ಹೋಬಳಿಯಲ್ಲಿ ಕುಡಿಯುವ ನೀರಿನ ಮತ್ತು ಅಂತರ್ಜಲ ಸಮಸ್ಯೆ ಹೆಚ್ಚಾಗಿರುವ ಕಾರಣ ಧರ್ಮಪುರ ಕೆರೆಯಿಂದ ಹಲಗಲದ್ದಿ, ಮದ್ದಿಹಳ್ಳಿ, ಖಂಡೇನಹಳ್ಳಿ, ಬೇತೂರು, ಅರಳೀಕೆರೆ, ಹೊಸಕೆರೆ ಮತ್ತು ಇತರೆ ಗೋಕಟ್ಟೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿಗೆ 2025-26ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ರೂ.28 ಕೋಟಿಗಳ ಅನುದಾನ ಮೀಸಲಿರಿಸಿ,
ಆಯವ್ಯಯದಲ್ಲಿ ಘೋಷಣೆ ಮಾಡಲು ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿ ರೈತರ ಬಹುದಿನಗಳ ಬೇಡಿಕೆಯ ಬಗ್ಗೆ ಸಚಿವರಿಗೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಸುಧಾಕರ್ ವಿವರಿಸಿ ಮಹತ್ವದ ಈ ಎರಡು ಯೋಜನೆಗಳಿಗೆ ಮುಂಬರುವ ಬಜೆಟ್ ನಲ್ಲಿ ಅನುಮಾನ ಮೀಸಲಿಡಬೇಕು ಎಂದು ಮನವಿ ಮಾಡಿದರು.

