ಗಿಲಿಕೇನಹಳ್ಳಿ ಮೃತ ವ್ಯಕ್ತಿ ಪತ್ನಿಗೆ ಕೆಲಸ ಸಚಿವ ಸುಧಾಕರ್

News Desk

ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಅಪ್ರಾಪ್ತ ಮಗಳನ್ನು ಅಪಹರಿಸಲಾಗಿದ್ದು
, ಯುವಕನ ವಿರುದ್ಧ ಫೋಕ್ಸೋ ಪ್ರಕರಣ ದಾಖಲಿಸಲು ಒತ್ತಾಯಿಸಿದ್ದು, ಪೊಲೀಸರು ನಿರಾಕರಿಸಿದ್ದರಿಂದ ಬೇಸತ್ತ ಪಟ್ಟಣದ ಪೋಲಿಸ್ ಠಾಣೆ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ತಾಲ್ಲೂಕಿನ ಗಿಲಿಕೇನಹಳ್ಳಿಯ ಅಜ್ಜಯ್ಯ ನಿವಾಸಕ್ಕೆ ಜಿಲ್ಲಾ ಸಚಿವ ಡಿ. ಸುಧಾಕರ್, ಮಾಜಿ ಸಚಿವ ಎಚ್. ಆಂಜನೇಯ ಭೇಟಿ ನೀಡಿ, ಪತ್ನಿ ಪುಷ್ಪಾವತಿ ಅವರಿಗೆ ಧನಸಹಾಯ ನೀಡಿ ಸಾಂತ್ವನ ಹೇಳಿದರು.

ಮೃತ ಅಜ್ಜಯ್ಯ ಪತ್ನಿಗೆ ಹನುಮಂತ ದೇವರ ಕಣಿವೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸಲಾಗುವುದು. ಅಜ್ಜಯ್ಯ ರೈತನಾಗಿದ್ದು, ಕೃಷಿಗಾಗಿ ಸಾಲ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ವಿಷಯ ಮನದಟ್ಟು ಮಾಡಿ ಸೂಕ್ತ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು.

- Advertisement - 

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಕೊಳವೆ ಬಾವಿ ಕೊರೆಯಿಸಿ ಕೊಡಲಾಗುವುದು. ದೂರು ದಾಖಲಿಸಲು ವಿಳಂಬ ಮಾಡಿದ ಹಾಗೂ ಪ್ರತಿಭಟನಕಾರರ ಮೇಲೆ ಲಾಠಿ ಪ್ರಹಾರ ನಡೆಸಿದ ಪೋಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಾಜಿ ಸಚಿವ ಆಂಜನೇಯ ಮಾತನಾಡಿ, ತಾಲ್ಲೂಕಿನಲ್ಲಿ ನಡೆಯಬಾರದ ಘಟನೆ ನಡೆದಿದ್ದು, ಜನ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಷ್ಕರ ನಡೆಸುವುದು ಸಾರ್ವಜನಿಕರ ಹಕ್ಕು. ಪೋಲೀಸ್ ಠಾಣೆ ಬಳಿ ಶವ ಇಟ್ಟು ಪ್ರತಿಭಟನೆ ನಡೆಸುವಾಗ ಮನವೊಲಿಸುವುದನ್ನು ಬಿಟ್ಟು ಲಾಠಿ ಪ್ರಹಾರ ನಡೆಸಿರುವುದು ತಪ್ಪು ಎಂದರು.

- Advertisement - 

ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪೆÇಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲಿ ಜನರ ಮನವೊಲಿಸಿದೆ. ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು ಎಂದು ತಿಳಿಸಿದರು.

ಈ ಘಟನೆ ನಿಭಾಯಿಸುವಲ್ಲಿ ಪೊಲೀಸರು ಅಸಡ್ಡೆ, ಅನಗತ್ಯ ಗೊಂದಲದ ಜೊತೆಗೆ ಒತ್ತಡಕ್ಕೆ ಮಣಿದಿರುವ ರೀತಿ ಕಾಣುತ್ತಿದೆ. ಈ ಸಂಬಂಧ ಗ್ರಾಮಸ್ಥರು, ಕುಟುಂಬಸ್ಥರು ದೂರಿದ್ದಾರೆ. ಮಗಳನ್ನು ಇಂತಹವರೇ ಅಪಹರಣ ಮಾಡಿದ್ದಾರೆಂದು ತಂದೆ ದೂರು ಕೊಟ್ಟ ತಕ್ಷಣ ದಾಖಲಿಸಿಕೊಂಡು ಮಗಳನ್ನು ತಂದೆ ಎದುರು ವಿಚಾರಣೆ ನಡೆಸಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಮುಗ್ಧ ಅಜ್ಜಯ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಈ ವಿಷಯದಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಬೇಸರಿಸಿದರು.

ಪೊಲೀಸರು ನಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದು, ಭಯದ ವಾತಾವರಣ ಸೃಷ್ಠಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಅಮಾಯಕರು ಹಾಗೂ ಪ್ರತಿಭಟನೆ ನಡೆಸಿದವರ ವಿರುದ್ಧ ದೂರು ದಾಖಲಿಸಲು ನಾವು ಬಿಡುವುದಿಲ್ಲ. ಅಂತಹ ನಿರ್ಧಾರ ಕೈಗೊಂಡರೇ ಪೊಲೀಸರ ವಿರುದ್ಧವೇ ಸರ್ಕಾರಕ್ಕೆ ದೂರು ನೀಡಲಾಗುವುದು. ಈ ವಿಷಯದಲ್ಲಿ ಆತಂಕ ಬೇಡ ಎಂದು ಅಭಯ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ, ಪಿ.ಆರ್.ಶಿವಕುಮಾರ್, ಎಂ.ಜೆ. ಹನುಮಂತಪ್ಪ, ಸಿ.ರಾಮಪ್ಪ, ರೆಡ್ಡಿ ರಂಗಪ್ಪ, ಡಿ.ಸಿ.ನವೀನ್, ಎಂ.ಟಿ.ರಂಗಸ್ವಾಮಿ, ಕುಬೇಂದ್ರಪ್ಪ, ಪಾಡಿಗಟ್ಟೆ ಸುರೇಶ್, ಸಂಗನ ಗುಂಡಿ ಮಂಜುನಾಥ್, ಪಿ.ಹನುಮಂತಪ್ಪ, ಕರಿಯಪ್ಪ, ಎಂ.ಟಿ.ರಾಜಪ್ಪ ಇದ್ದರು.

 

Share This Article
error: Content is protected !!
";