ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯದಲ್ಲಿ ಕರ್ನಾಟಕ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಶಾಸಕರ ಆಪ್ತರು, ಸಚಿವರ ಗುಲಾಮರ ಗೂಂಡಾಗಿರಿ ಮಿತಿ ಮೀರುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಸಚಿವ ಡಿ. ಸುಧಾಕರ್‌ಆಪ್ತ ಸರ್ಕಾರಿ ಹೊಯ್ಸಳ ವಾಹನದ ಕೀ ಕಿತ್ತು ಪೊಲೀಸರಿಗೆ ಧಮ್ಕಿ ಹಾಕಿದ್ದಾನೆ. ಒಂದು ಕಡೆ ಕಲಾವಿದರಿಗೆ ನಟ್ಟು ಬೋಲ್ಟ್‌ಟೈಟು ಮಾಡುವ ಬೆದರಿಕೆ ಹಾಕುವ ಡಿ.ಕೆ.ಶಿವಕುಮಾರ್ ಅವರಿಗೆ ಕೊತ್ವಾಲ್‌ಘಟಕದ ನಟ್ಟು ಬೋಲ್ಟು ಟೈಟು ಮಾಡಲು ಆಗುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ಸಿನ ಕೊತ್ವಾಲ್‌ಘಟಕ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಿ ರಾಜ್ಯದಲ್ಲಿ ಪೊಲೀಸರಿಗೆ ಬೆದರಿಕೆ ಹಾಕುವ ಹಂತಕ್ಕೆ ತಲುಪಿದೆ. ಇನ್ನೂ ಜನಸಾಮಾನ್ಯರ ಪಾಡೇನು? ಎಂದು ಬಿಜೆಪಿ ಪ್ರಶ್ನಿಸಿದೆ.

