ಪಾಕಿಸ್ತಾನದ ಲಾಹೋರ್ ಮತ್ತು ಕರಾಚಿಯಲ್ಲಿ ಆತ್ಮಹತ್ಯಾ ಡ್ರೋನ್ ದಾಳಿ

News Desk

ಚಂದ್ರವಳ್ಳಿ ನ್ಯೂಸ್, ಇಸ್ಲಾಮಾಬಾದ್:
ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದಾಗಿ ಹೈರಾಣಾಗಿರುವ ಪಾಕಿಸ್ತಾನದಲ್ಲಿ ಗುರುವಾರ ಬೆಳಗ್ಗೆಯಿಂದ ಮತ್ತೆ ಸೈರನ್ ಮೊಳಗುತ್ತಿದ್ದು
, ಲಾಹೋರ್ ಮತ್ತು ಕರಾಚಿಯಲ್ಲಿ ಆತ್ಮಹತ್ಯಾ ಡ್ರೋನ್ ದಾಳಿ ನಡೆಯುತ್ತಿದೆ ಎಂದು ಹೇಳಲಾಗಿದೆ.

ಪಾಕಿಸ್ತಾನದ ಲಾಹೋರ್‌ನಲ್ಲಿ ಗುರುವಾರ ದೊಡ್ಡ ಸರಣಿ ಸ್ಫೋಟಗಳು ಕೇಳಿ ಬಂದಿದ್ದರಿಂದ ಸೈರನ್‌ಗಳು ಮೊಳಗಲಾರಂಭಿಸಿವೆ. ಭಯಭೀತರಾದ ಜನರು ಮನೆಗಳಿಂದ ಹೊರಗೆ ಓಡಿ ಬರುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ಈ ಕುರಿತು ವರದಿ ಮಾಡಿದ್ದು, ಅಜ್ಞಾತ ಸ್ಥಳಗಳಿಂದ ಹಾರಿ ಬಂದ ಆತ್ಮಹತ್ಯಾ ಡ್ರೋನ್ ಗಳು ಕರಾಚಿ ಮತ್ತು ಲಾಹೋರ್ ನ ನಿಗಧಿತ ಪ್ರದೇಶ ಮತ್ತು ಕಟ್ಟಡಗಳಿಗೆ ನುಗ್ಗಿ ಸ್ಫೋಟಗೊಳ್ಳುತ್ತಿವೆ ಎಂದು ವರದಿ ಮಾಡಿವೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ಮಂಗಳವಾರ ಮುಂಜಾನೆ ಆಪರೇಷನ್ ಸಿಂಧೂರ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ಮಾಡಿ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಹೊಡೆದುರುಳಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.

 

 

Share This Article
error: Content is protected !!
";