ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಖ್ಯಾತ ಆರ್ಥಿಕ ತಜ್ಞ, ಸಮಾಜ ಮುಖಿ ಚಿಂತಕ, ನಾಟಕಕಾರ ಹಾಗೂ ಕವಿ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪನವರ ಪತ್ನಿ ಸುಲೋಚನಮ್ಮ ಮಲ್ಲಿಕಾರ್ಜುನಪ್ಪ(60) ಶನಿವಾರ ನಿಧನ ಹೊಂದಿದ್ದಾರೆ.
ಮೃತ ಸುಲೋಚನಮ್ಮ ಪತಿ ಜಿ.ಎನ್.ಮಲ್ಲಿಕಾರ್ಜನಪ್ಪ ಸೇರಿದಂತೆ ಓರ್ವ ಪುತ್ರ, ಓರ್ವ ಪುತ್ರಿ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಶನಿವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಮೃತರ ಸ್ವ ಗ್ರಾಮ ಚಿತ್ರದುರ್ಗ ತಾಲೂಕಿನ ಕ್ಯಾಸಪುರ ಗ್ರಾಮದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.