ಇ-ಖಾತಾ ಅಭಿಯಾನದಲ್ಲಿ ಪ್ರಥಮ ಸ್ಥಾನ ಪಡೆದಿದ್ದೇವೆ-ಸುಮಿತ್ರಾ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರಸಭೆಯು ಕಳೆದ ವರ್ಷಗಳಲ್ಲಿ ಶೇಕಡಾ
85ರಿಂದ 90 ರಷ್ಟು ಇದ್ದ ತೆರಿಗೆ ವಸೂಲಾತಿ ಕಳೆದ 9 ತಿಂಗಳ ಅವಧಿಯಲ್ಲಿ ಶೇ.100ರಷ್ಟು ಸಾಧನೆ ಮಾಡಲಾಗಿದೆ. ಅಲ್ಲದೇ ಇ -ಖಾತಾ ಅಭಿಯಾನದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದೇವೆ ಎಂದು ನಗರ ಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್ ತಿಳಿಸಿದರು.

 ದೊಡ್ಡಬಳ್ಳಾಪುರ ನಗರ ಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ನಾನು ಅಧಿಕಾರಕ್ಕೆ ಬಂದು 9 ತಿಂಗಳು ಕಳೆದಿವೆ ಈ ಅವಧಿಯಲ್ಲಿ ಕೈಗೊಂಡಿರುವ ಯೋಜನೆ ಹಾಗೂ ಕಾರ್ಯಕ್ರಮ, ಕಾರ್ಯವೈಖರಿಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಈ ಸುದ್ದಿಗೋಷ್ಠಿ ಕರೆಯಲಾಗಿದ್ದು, ಪ್ರಸ್ತುತ ಶೇಕಡಾ 100ರಷ್ಟು ತೆರಿಗೆ ವಸೂಲಾತಿಮಾಡುವ ಮೂಲಕ ನಗರಸಭೆಗೆ ಆದಾಯ ಹೆಚ್ಚಿಸಲಾಗಿದೆ ,

ನಗರದ ಅಭಿವೃದ್ಧಿಗಾಗಿ ಪ್ರತಿ ವಾರ್ಡಿಗೂ 10ಲಕ್ಷಗಳ ಅನುದಾನ ನೀಡಲಾಗಿದೆ, ಅಲ್ಲದೇ ಇ -ಖಾತಾ ಅಭಿಯಾನವನ್ನು ಉತ್ತಮ ರೀತಿಯಲ್ಲಿ ಅನುಷ್ಠಾನ ಮಾಡುವ ಸಲುವಾಗಿ  ನಗರದ 31 ವಾರ್ಡ್ ಗಳಲ್ಲೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಅತಿಹೆಚ್ಚು ಇ ಖಾತೆ ಮಾಡಿಸುವ ಮೂಲಕ ಜಿಲ್ಲೆಯಲ್ಲೆ ಮೊದಲ ಸ್ಥಾನದಲ್ಲಿ ನಾವಿದ್ದೇವೆ ಎಂಬುದೇ ಹೆಮ್ಮೆಯ ವಿಷಯ ಎಂದರು‌.

 ನಗರಸಭೆ ಉಪಾಧ್ಯಕ್ಷ ಎಂ ಮಲ್ಲೇಶ್ ಮಾತನಾಡಿ ನಗರದಲ್ಲಿ ಪ್ರಮುಖವಾಗಿ ಕಸ ವಿಲೇವಾರಿ ಸಮಸ್ಯೆ ಇದ್ದು ಈ ಸಮಸ್ಯೆಗೆ ಪರಿಹಾರವಾಗಿ ಚಿಕ್ಕಬಳ್ಳಾಪುರದ ಒಂದು NGO ಸಂಸ್ಥೆಯು ನಮ್ಮೊಂದಿಗೆ ಕೈ ಜೋಡಿಸಿದ್ದು ಹಸಿಕಸ ವನ್ನು ರೈತರ ಹೊಲಗಳಿಗೆ ನೀಡಲಾಗುತ್ತಿದೆ, ಸುಮಾರು 50 ರೈತರಿಗೆ ಹಸಿಕಸವನ್ನು ನೀಡಲಾಗುತ್ತಿದ್ದು ನಗರಸಭೆಗೆ ಸಾಕಷ್ಟು ಸಹಕಾರಿಯಾಗಿದೆ. ನಗರದ ಎಲ್ ಐ ಸಿ ಕಚೇರಿ ಪಕ್ಕದಲ್ಲಿ 1ಕೋಟಿ ವೆಚ್ಚದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣವಾಗುತ್ತಿದೆ ಅಲ್ಲದೇ ಕೆರೆ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸ್ಥಾಯಿಸಮಿತಿ ಅಧ್ಯಕ್ಷ ರವಿ ಕುಮಾರ್ ಮಾತನಾಡಿ ನಗರದಲ್ಲಿ ಕಟ್ಟುವ ನೂತನ ಕಟ್ಟಡಗಳ ಶುಲ್ಕ ವಸೂಲಾತಿ 26ಲಕ್ಷ ಆಗಿದ್ದು, ಅಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ನಗರಸಭೆಯಿಂದ ನೋಟಿಸ್ ನೀಡುವ ಮೂಲಕ ಕಾನೂನು ಕ್ರಮಕ್ಕೆ ಮುಂದಾಗುತ್ತಿದ್ದೇವೆ.26 ಸಾವಿರ ಅಧಿಕೃತ ಖಾತೆ ಇದ್ದು ಸುಮಾರು 6000 ಖಾತೆಗಳನ್ನು ಲೋಕಾಯುಕ್ತಗೆ ನೀಡುವ ಮೂಲಕ ರದ್ದುಗೊಳಿಸಿದ್ದೇವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ನಮ್ಮ ನಗರಸಭೆ ವತಿಯಿಂದ 2800 ಖಾತೆ ಮಾಡಲಾಗಿದೆ, ಖಾತಾ ಮಾಡುವ ಪ್ರಕ್ರಿಯೆ ನಿಧಾನವಾಗಿದೆ ,ಒಂದೇ ಬಾರಿ 3000 ಕ್ಕೂ ಅಧಿಕ ಅರ್ಜಿಗಳು ಬಂದ ಕಾರಣ ಖಾತಾ ಪ್ರಕ್ರಿಯೆ ಸಮಯ ತೆಗೆದುಕೊಂಡಿದೆ.ಪೌರಕಾರ್ಮಿಕರಿಗೆ ಸರ್ಕಾರಿ ಸವಲತ್ತು ಹೊರತು ಪಡಿಸಿ ಹಲವು ಪೂರಕ ಕಾರ್ಯಕ್ರಮಗಳನ್ನು ಕಲ್ಪಿಸುವ ಮೂಲಕ ಪೌರಾಕಾರ್ಮಿಕರ ಅಭಿವೃದ್ದಿಗೆ ಶ್ರಮಿಸಲಾಗುತ್ತಿದೆ ಎಂದರು.

 

 

 

Share This Article
error: Content is protected !!
";