ನಾಲ್ವರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಬೆಂಗಳೂರಿನ ಸಾಫ್ಟ್​​ವೇರ್​ ಎಂಜಿನಿಯರ್​ ಬಿವಿ ಗಿರೀಶ್​ ಅವರ
2003ರಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಆತನೊಂದಿಗೆ ಮದುವೆ ನಿಶ್ಚಿತಗೊಂಡಿದ್ದ ಶುಭಾ ಮತ್ತು ಆಕೆಯ ಪ್ರಿಯಕರ ಸೇರಿದಂತೆ ನಾಲ್ವರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್​ ಎತ್ತಿ ಹಿಡಿದಿದೆ.

ಕರ್ನಾಟಕ ಹೈಕೋರ್ಟ್​ ನೀಡಿದ್ದ ಶಿಕ್ಷೆಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠವು ಎತ್ತಿ ಹಿಡಿದಿದೆ. ಈ ನಾಲ್ವರು ಆರೋಪಿಗಳು ಅಪರಾಧಿಗಳಾಗಿ ಹುಟ್ಟಿಲ್ಲ. ಆದರೆ, ಅಪಾಯಕಾರಿಯಾದ ತಪ್ಪು ತೀರ್ಮಾನ ಈ ಹೀನ ಕೃತ್ಯಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.

- Advertisement - 

132 ಪುಟಗಳ ಈ ತೀರ್ಪು ನೀಡಿದ ಕೋರ್ಟ್​​, ದಾಖಲೆಗಳಲ್ಲಿರುವ ಸಾಕ್ಷ್ಯಗಳು ಸಮರ್ಪಕತೆ ಬಗ್ಗೆ ತೃಪ್ತಿ ಹೊಂದಿದ್ದು ಅಪರಾಧಿಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿ ವಜಾಗೊಳಿಸಿದೆ ಎಂದಿತು.

ಶುಭಾಳ ಮಾನಸಿಕ ಒಲವು ಮತ್ತು ಸ್ವಭಾವವನ್ನು ಅವರ ಕುಟುಂಬ ಅರ್ಥಮಾಡಿಕೊಂಡಿದ್ದರೆ ಈ ದುರದೃಷ್ಟಕರ ಘಟನೆ ಸಂಭವಿಸುತ್ತಿರಲಿಲ್ಲ. ಬಲವಂತದ ಕೌಟುಂಬಿಕ ನಿರ್ಧಾರದಿಂದ ಕಂಗೆಟ್ಟ ಮಹತ್ವಾಕಾಂಕ್ಷೆಯ ಯುವತಿಯ ಮನಸ್ಸಿನಲ್ಲಿ ಅತ್ಯಂತ ತೀವ್ರವಾದ ಪ್ರಕ್ಷುಬ್ಧತೆ ಸೃಷ್ಟಿಸಿತು. ಇದು ಮಾನಸಿಕ ಹಿಂಸೆ ಮತ್ತು ಉಗ್ರ ಪ್ರಣಯತೆಯ ಅಪವಿತ್ರ ಮೈತ್ರಿಯ ಬೆಂಬಲದೊಂದಿಗೆ, ಮುಗ್ಧ ಯುವಕನ ದುರಂತ ಹತ್ಯೆಗೆ ಕಾರಣವಾಯಿತು. ಅದೇ ಸಮಯದಲ್ಲಿ ಇತರ ಮೂವರ ಜೀವನ ಹಾಳಾಯಿತು ಎಂದು ನ್ಯಾಯಮೂರ್ತಿ ಸುಂದರೇಶ್ ತಿಳಿಸಿದರು.

- Advertisement - 

ಈ ಪ್ರಕರಣದಲ್ಲಿ ನ್ಯಾಯಾಲಯವಾಗಿ ಈ ವಿಷಯವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ಸುಪ್ರೀಂ ಪೀಠ ಪ್ರಯತ್ನಿಸುತ್ತದೆ, ಘಟನೆ ನಡೆದ ಸಂದರ್ಭ ಗಮನದಲ್ಲಿರಿಸಿಕೊಂಡು ಅಪರಾಧಿ ಶುಭಾಳಿಗೆ ಕರ್ನಾಟಕ ರಾಜ್ಯಪಾಲರ ಮುಂದೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಲು ಅನುಮತಿ ನೀಡುತ್ತದೆ. ಈ ಅರ್ಜಿ ಸಲ್ಲಿಕೆಗೆ ಎಂಟು ವಾರಗಳ ಕಾಲಾವಕಾಶವನ್ನು ಪೀಠ ನೀಡುತ್ತದೆ ಎಂದು ಹೇಳಿದೆ.

ಏನಿದು ಪ್ರಕರಣ:
ಮೃತ ಬಿ. ವಿ. ಗಿರೀಶ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು ಶುಭಾಳೊಂದಿಗೆ
2003ರ ನವೆಂಬರ್​​ 30 ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ಎರಡೇ ದಿನಕ್ಕೆ 2003ರ ಡಿಸೆಂಬರ್ 3ರಂದು ಶುಭಾ ತನ್ನ ಪ್ರಿಯಕರ ಅರುಣ್ ವರ್ಮಾ ಹಾಗೂ ವೆಂಕಟೇಶ್, ದಿನೇಶ್ – ಪಿತೂರಿ ನಡೆಸಿ ಗಿರೀಶ್ ಅವರನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.​ ಅರುಣ್​ ಜೊತೆಗಿನ ಪ್ರೀತಿ ತಿಳಿದಿದ್ದ ಶುಭಾ ಕುಟುಂಬ ಈ ಮದುವೆಗೆ ಒತ್ತಾಯಿಸಿದ್ದೇ ಆಕೆ ಈ ಕೃತ್ಯವೆಸಗಲು ಕಾರಣ ಎಂದು ಆರೋಪಿಸಲಾಗಿತ್ತು.

 

Share This Article
error: Content is protected !!
";