ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸಾಲಬಾಧೆ ತಾಳಲಾರದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿರಿಯೂರು ತಾಲೂಕಿನ ಬ್ಯಾರಮಡು ಗ್ರಾಮದಲ್ಲಿ ನಡೆದಿದೆ. ಬಿ.ಜಿ.ಗುರುರಾಜ (62) ತಂದೆ ಗೋವಿಂದಪ್ಪ ಆತ್ಮಹತ್ಯೆಗೆ ಶರಣಾದ ರೈತ.
ಗುರುರಾಜ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ರೂ.3 ಲಕ್ಷ, ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ 50 ಸಾವಿರ, ಶ್ರೀ ಮಂಜುನಾಥ ಸಂಘದಲ್ಲಿ 2 ಲಕ್ಷ, ಗ್ರಾಮೀಣ ಕೂಟದಲ್ಲಿ 50 ಸಾವಿರ, ಸ್ತ್ರೀ ಶಕ್ತಿ ಸಂಘದಲ್ಲಿ 50 ಸಾವಿರ ಸೇರಿ ಒಟ್ಟು 6.50 ಲಕ್ಷ ರೂ ಸಾಲ ಮಾಡಿಕೊಂಡಿದ್ದರು.
ಪಡೆದ ಸಾಲದಿಂದ ತಮ್ಮ ಐದು ಎಕರೆ ಜಮೀನಿನಲ್ಲಿ ರಾಗಿ, ಮೆಣಸಿನಕಾಯಿ, ಬೆಳೆದಿದ್ದರು. ಅಲ್ಲದೆ ಕೊಳವೆ ಬಾವಿಗಳು ವಿಫಲವಾಗಿದ್ದರಿಂದ ಹಲವು ಬಾರಿ ಬೆಳೆ ನಷ್ಟ ಎದುರಾಗಿದ್ದು, ಸಾಲದ ಹೊರೆ ತಾಳಲಾರದೆ, ಮಂಗಳವಾರ ತಮ್ಮ ಮನೆಯಲ್ಲೇ ನೇಣಿ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಸಂಬಂಧ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ರೈತ ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

