ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ಜಂಟಿ ಖಾತೆಯಲ್ಲಿದ್ದ ಜಮೀನಿನ ಪೋಡು ಮಾಡಿಕೊಡಲು 15 ಸಾವಿರ ರೂ.ಲಂಚಕ್ಕೆ ಬೇಡಿ ಇಟ್ಟು 10 ಸಾವಿರ ಲಂಚ ಪಡೆಯುವಾಗ ಸರ್ವೇಯರ್ ಎಸ್.ಕೆ ನಾಗರಾಜ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ದೂರುದಾರರಾದ ಶಶಿಕಲಾ ಅವರ ಪತಿಯ ದೊಡ್ಡಮ್ಮನ ಮಗಳಾದ ಜ್ಯೋತಿ ಹೆಸರಿನಲ್ಲಿ ಜಮೀನಿನ ಖಾತೆ ಜಂಟಿಯಾಗಿದ್ದು ಪಹಣಿ ಪ್ರತ್ಯೇಕ ಮಾಡಿಕೊಡಲು ಆರೋಪಿ ಸರ್ವೇಯರ್ ನಾಗರಾಜ್
15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು 10 ಸಾವಿರ ರೂ.ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಲಂಚದ ಹಣ ಸಮೇತ ಆರೋಪಿ ಸರ್ವೇಯರ್ ನಾಗರಾಜ್ ನನ್ನು ಬಂಧಿಸಿದ್ದಾರೆ.

