ಸುಷ್ಮಾ ಹಾಗೂ ಅವರ ಮಕ್ಕಳು ಕಣ್ಮರೆ ಪತ್ತೆಗೆ ಮನವಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ತಾಲ್ಲೂಕು ಬೋಮ್ಮನಕಟ್ಟೆ ಗ್ರಾಮದ ಸುಷ್ಮಾ ಕರಿಯಪ್ಪ(27) ಹಾಗೂ ಅವರ ಇಬ್ಬರ ಮಕ್ಕಳಾದ 6 ವರ್ಷದ ಚಿರಂತ್.ಕೆ  ಹಾಗೂ 3 ವರ್ಷದ ಕೃತ್ವಿಕ್.ಕೆ ಕಾಣೆಯಾದ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ಸುಷ್ಮ ಮನೆ ಕೆಲಸ ಮಾಡುತ್ತಿದ್ದು, 5 ಅಡಿ ಎತ್ತರ, ಕೋಲುಮುಖ, ಸಾದಾರಣ ಮೈಕಟ್ಟು, ಗೋಧಿ ಮೈಬಣ್ಣವನ್ನು ಹೊಂದಿದ್ದು, ಕನ್ನಡ ಬಾಷೆಯನ್ನು ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಚೂಡಿದಾರ್ ಮತ್ತು ಪ್ಯಾಂಟ್ ಧರಿಸಿರುತ್ತಾರೆ.

- Advertisement - 

ಕಾಣೆಯಾದವರ ಗುರುತು ಪತ್ತೆಯಾದವರು ಹೊಳಲ್ಕೆರೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 9480803151, ಹೊಳಲ್ಕೆರೆ ವೃತ್ತ ಕಛೇರಿ ಸಂಖ್ಯೆ 9480803135 ಗೆ ಕರೆ ಮಾಡುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

- Advertisement - 

 

 

Share This Article
error: Content is protected !!
";