ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪ್ರತಿನಿತ್ಯ ಪತಿ ನೀಡುತ್ತಿದ್ದ ಮಾನಸಿಕ, ದೈಹಿಕ ಹಿಂಸೆಯನ್ನು ತಾಳಲಾರದೆ ಗಂಡನ ಕಿರುಕುಳದಿಂದ ಬೇಸತ್ತ ಪತ್ನಿ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಪನಹಳ್ಳಿ ಗ್ರಾಮದ ಗೊಲ್ಲರಹಟ್ಟಿಯಲ್ಲಿ ಜೂನ್ ೨೮ರ ಸಂಜೆ ನಡೆದಿದೆ.
ಮೃತಪಟ್ಟಳು ದೇವರಮರಿಕುಂಟೆಯ ವಿ.ಸುಶ್ಮಿತಾ(೨೭) ಈಕೆಯನ್ನು ಕಳೆದ ೨೦೧೬ರಲ್ಲಿ ಗೋಪನಹಳ್ಳಿಯ ಮಹಲಿಂಗಪ್ಪ ಎಂಬುವವರಿಗೆ ಕೊಟ್ಟುಮದುವೆ ಮಾಡಿದ್ದು ದಂಪತಿಗಳಿಗೆ ಅವಳಿ ಮಕ್ಕಳಿದ್ದು ಇತ್ತೀಚಿನ ದಿನಗಳಲ್ಲಿ ಗಂಡ ಮಹಲಿಂಗಪ್ಪ ಮನೆಗೆ ಸರಿಯಾಗಿ ಬಾರದೆ ಪತ್ನಿ ಹಾಗೂ ಮಕ್ಕಳೊಂದಿಗೆ ಅನ್ಯೂನವಾಗಿರದೆ ಪತ್ನಿ ಕೇಳಿದರೆ ಆಕೆಯ ಮೇಲೆ ದೌರ್ಜನ್ಯ ನಡೆಸುತ್ತಾ ನೀನು ಎಲ್ಲಾದರೂ ಹೋಗಿ ಸಾಯಿ,
ಇಲ್ಲ ನಾನೇ ಸಾಯಿಸುತ್ತೇನೆಂದು ರೇಗಾಡುತ್ತಿದ್ದು, ನೊಂದ ಪತ್ನಿ ಸುಶ್ಮಿತ ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆಂದು ಸುಶ್ಮಿತಾಳ ಸಹೋದರ ವಿ.ನಾಗರಾಜು ಪೊಲೀಸರಿಗೆ ದೂರು ನೀಡಿದ್ದಾನೆ. ಪಿಎಸ್‌ಐ ಈರೇಶ್ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದು ಆರೋಪಿ ಪತಿಮಹಲಿಂಗಪ್ಪ(೩೮) ನ್ಯಾಯಾಂಗ ವಶಕ್ಕೆ ನೀಡಿರುತ್ತಾರೆ.