ಉಪವಲಯ ಅರಣ್ಯಾಧಿಕಾರಿ ಅಮಾನತು

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಬೀಟೆ ಮರದ ದಿಮ್ಮಿಗಳ ಕಳ್ಳ ಸಾಗಾಣಿಕೆ ಆರೋಪದಡಿಯಲ್ಲಿ ಉಪವಲಯ ಅರಣ್ಯಾಧಿಕಾರಿ ಆರ್. ಯುವರಾಜ್‌ರನ್ನು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
 

ಹೊಸನಗರ ತಾಲೂಕಿನ ಎಂ.ಗುಡೇಕೊಪ್ಪ ಗ್ರಾಮ ಅರಣ್ಯ ಸಂರಕ್ಷಣಾಧಿಕಾರಿ ಅರಳಿಕೊಪ್ಪ ಗ್ರಾಮದ ಸರ್ವೆ ನಂಬರ್ 57ರಲ್ಲಿ ಬಿದ್ದಿದ್ದ ಬೀಟೆ ಮರವನ್ನು ಸರ್ಕಾರಿ ನಾಟ ಸಂಗ್ರಹಾಲಯಕ್ಕೆ ಸಾಗಿಸದೆ ಅಕ್ರಮವಾಗಿ ಬೇರೆ ಕಡೆಗೆ ಸಾಗಿಸಿದ ಆರೋಪ ಕೇಳಿಬಂದಿತ್ತು. 

ಈ ಸಂಬಂಧ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅರಣ್ಯ ಸಚಿವರ ಮೌಖಿಕ ನಿರ್ದೇಶನದ ಮೇರೆಗೆ ವಿಚಾರಣೆ ನಡೆಸಿದ್ದರು. ಈ ಕುರಿತು ಸಾಗರದ ಉಪ ಸಂರಕ್ಷಣಾಧಿಕಾರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ವರದಿ ನೀಡಿತ್ತು. 

ಸ್ಥಳ ಪರಿಶೀಲನೆ ನಡೆಸಿದ್ದ ವಿಚಾರಣಾ ತಂಡದ ಎದುರು ಆರೋಪಿತ ಉಪ ವಲಯ ಅರಣ್ಯಾಧಿಕಾರಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಸಲ್ಲಿಸಿದ ವರದಿಯಲ್ಲಿ ಹೇಳಿದ್ದಾರೆ.

 

- Advertisement -  - Advertisement - 
Share This Article
error: Content is protected !!
";