ಸೆ.14ರಂದು ಸ್ವಚ್ಚತಾ ಹೀ ಸೇವಾ ಪ್ರಾಕ್ಷಿಕ ಕಾರ್ಯಕ್ರಮ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರಸಭೆ ಸಭಾಂಗಣದಲ್ಲಿ ಸೆ.14 ರಂದು ಬೆಳಿಗ್ಗೆ 10.30ಕ್ಕೆ ಸ್ವಚ್ಚತಾ ಹೀ ಸೇವಾ ಪ್ರಾಕ್ಷಿಕ-2024 ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಸೆ.14 ರಿಂದ ಅ.02ರವರೆಗೆ ಸ್ವಚ್ಚತೆಯ ಸಹಭಾಗಿತ್ವ ಮತ್ತು ಸ್ವಚ್ಚತೆ ಸೇವೆ ಒಂದೇ ನಮ್ಮ ಗುರಿಎಂಬ ಶೀರ್ಷಿಕೆಯಡಿ ನಗರದಾದ್ಯಂತ ಶ್ರಮದಾನ, ಆಂದೋಲನ ಸಫಾಯಿಮಿತ್ರ ಸುರಕ್ಷಾ ಶಿಬಿರ, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಬೀದಿಬದಿ, ವಾಣಿಜ್ಯ ಪ್ರದೇಶದ ವ್ಯಾಪಾರಸ್ಥರಿಗೆ ಏಕಬಳಿಕೆ ಪ್ಲಾಸ್ಟಿಕ್ ಸ್ವಚ್ಚತೆ ಅರಿವು, ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸಲಾಗುವುದು.

ಉದ್ಘಾಟನೆ ಸಮಾರಂಭದಲ್ಲಿ ಸಚಿವರು, ಶಾಸಕರು, ನಗರಸಭೆ ಅಧ್ಯಕ್ಷರು, ಸದಸ್ಯರು, ಇತರೆ ಗಣ್ಯರು, ನಗರದಲ್ಲಿನ ಎನ್.ಜಿ.ಓ, ಆರ್.ಡಬ್ಲ್ಯ.ಎ ಹಾಗೂ ಸ್ವಯಂ ಸೇವಾ ಸಂಘ ಸಂಸ್ಥೆಗಳು ಪಾಲ್ಗೊಳ್ಳಲಿವೆ.

ಸಾರ್ವಜನಿಕರು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ. 

- Advertisement -  - Advertisement -  - Advertisement - 
Share This Article
error: Content is protected !!
";