ಮಾನವ ಧರ್ಮ ಪ್ರತಿಪಾದಿಸಿದ ಸ್ವಾಮಿ ವಿವೇಕಾನಂದರು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವರ್ಣ ವ್ಯವಸ್ಥೆಯ ಶೋಷಣೆಯನ್ನು ಖಂಡಿಸಿ ಮಾನವ ಧರ್ಮವನ್ನ ಪ್ರತಿಪಾದಿಸಿದ ಸ್ವಾಮಿ ವಿವೇಕಾನಂದರು ಚಿಕಾಗೋ ಸಮ್ಮೇಳನದಲ್ಲಿ ನಾನು ಬುದ್ದನ ನಾಡಿನಿಂದ ಬಂದಿದ್ದೇನೆಂದು ಹೆಮ್ಮೆಯಿಂದ ಹೇಳಿ, ಬೌದ್ದ ಧರ್ಮವನ್ನು ಮನಸಾರೆ ಮೆಚ್ಚಿದ್ದರು ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.

ಚಿತ್ರದುರ್ಗ ನಗರದ ಕೋಟೆ ನಾಡು ಬುದ್ದ ವಿಹಾರದಲ್ಲಿ ಭಾನುವಾರ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೈಯಲ್ಲಿರೋ ರೇಖೆಗಳನ್ನೋ, ಹಣೆಯಲ್ಲಿ ಕಾಣದ ಹಣೆಬರಹವನ್ನೋ ನಂಬಿ ಕುರುಡು ಜೀವನ ನಡೆಸುವುದಕ್ಕಿಂತ ನಮ್ಮ ತಲೆಯಲ್ಲಿರುವ ಜ್ಞಾನವನ್ನು ಮತ್ತು ಮನಸ್ಸಿನಲ್ಲಿರುವ ಆತ್ಮವಿಶ್ವಾಸ ನಂಬಿ ಅರ್ಥಪೂರ್ಣ ಜೀವವನ್ನು ನಡೆಸಿದರೆ ಯಾವುದು ಅಸಾಧ್ಯವಲ್ಲ ಎಂದು ನಂಬಿದ್ದರು.

ಮೂಢನಂಬಿಕೆಯನ್ನು ಹಿಂಬಾಲಿಸಬೇಡಿ. ಅದಕ್ಕಿಂತಲೂ ನಾಸ್ತಿಕರಾಗುವುದು ಸೂಕ್ತ. ಇದರಿಂದ ನಮಗೆ ಮತ್ತು ದೇಶಕ್ಕೆ ಒಳ್ಳೆಯದು. ನಮ್ಮ ರಾಷ್ಟ್ರೀಯ ಆದರ್ಶಗಳಾದ ತ್ಯಾಗ ಮತ್ತು ಸೇವೆ ಇವೆರಡೂ ಆದರ್ಶಗಳಿದ್ದಾಗ ಉಳಿದೆಲ್ಲವು ಸರಿಯಾಗಿರುತ್ತದೆ. ಕುವೆಂಪು ಅವರು ತಮ್ಮ ಅಂತರAಗದ ಗುರುವನ್ನಾಗಿ ಆರಿಸಿಕೊಂಡ ವಿವೇಕಾನಂದರ ಪೂರ್ಣದೃಷ್ಟಿಯೇ ಕುವೆಂಪು ಅವರಲ್ಲೂ ಒಡಮೂಡಿತು ಎಂದರು.

ಲೇಖಕ ಮೊದುರು ತೇಜ ಮಾತನಾಡಿ ಸ್ವಾಮಿ ವಿವೇಕಾನಂದರು, ಹಸಿದವನಿಗೆ ಅನ್ನ ನೀಡಿದಾಗ ಅವನ ಮುಖದಲ್ಲಿ ಮೂಡುವ ಕಿರು ನಗೆಯಲ್ಲಿ ದೇವರನ್ನು ಕಾಣಿ ಎಂದು ಹೇಳಿದರು. ಅವರ ವಿಚಾರಗಳು ವೈಚಾರಿಕತೆಯಿಂದ ಕೂಡಿದ್ದವು. ಈ ಜಗತ್ತು ಒಂದು ಉದ್ಯಾನವನದಂತೆ ಅಲ್ಲಿ ಎಲ್ಲಾ ಬಗೆಯ ಹೂಗಳಿರುವಂತೆ ಎಲ್ಲಾ ಧರ್ಮವನ್ನು ಗೌರವಿಸಿ ಎಂದು ಬಹುತ್ವದ ಮಹತ್ವ ತಿಳಿಸಿದರು. ಜೊತೆಗೆ ಹಿಂದೂ ಧರ್ಮದಲ್ಲಿ ಲೋಪಗಳನ್ನು ತಿಳಿಸುತ್ತಾ ಅದು ಸುಧಾರಣೆಯಾಗಬೇಕು ಎಂದರು.

ಈ ಸಂದರ್ಭದಲ್ಲಿ ರಂಗ ನಿರ್ದೇಶಕ ಧೀಮಂತರಾವ್, ಹಿರಿಯೂರು ತಾಲೂಕು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಈ.ನಾಗೇಂದ್ರಪ್ಪ, ಶಿಕ್ಷಕರಾದ ಯರದಕಟ್ಟೆ ಲಕ್ಷ್ಮೀದೇವಿ, ಪಿಲ್ಲಹಳ್ಳಿ ರಾಮಣ್ಣ, ಲಾಯರ್ ಬೆನಕನಹಳ್ಳಿ ಚಂದ್ರಪ್ಪ, ಗುಡ್ಡದ ರಂಗವ್ವನಹಳ್ಳಿ ದುರ್ಗೇಶ್, ಶಾಂತಮ್ಮ, ತಿಪ್ಪಮ್ಮ, ದ್ರಾಕ್ಷಾಯಿಣಿ, ಬೆಸ್ಕಾಂ ತಿಪ್ಪೇಸ್ವಾಮಿ, ಬನ್ನಿಕೋಡ್ ರಮೇಶ್ ಇತರರಿದ್ದರು.

 

 

- Advertisement -  - Advertisement - 
Share This Article
error: Content is protected !!
";