ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ದೇವಿ ಯಾಗಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ ಸ್ವಾಮೀಜಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
ಶರಣ ಬಸವೇಶ್ವರ ಮಹಾ ಸಂಸ್ಥಾನದ ಶ್ರೀಗಳಾದ ಡಾ.ಶ್ರೀ ಪ್ರಣಾವಾನಂದ ಶ್ರೀಗಳು ಶನಿವಾರ ಬೆಂಗಳೂರಿನ ಜೆಪಿ ನಗರದಲ್ಲಿರುವ ಕೇಂದ್ರ ಉಕ್ಕು ಮತ್ತು ಕೈಗಾರಿಕಾ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಏಪ್ರಿಲ್ ೨೮ರಂದು ನಡೆಯಲಿರುವ ಮಹಾ ಪ್ರತ್ಯಂಗಿರಿ ದೇವಿಯಾಗಕ್ಕೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಯಿತು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಕರಪತ್ರಗಳನ್ನು ಕೇಂದ್ರ ಸಚಿವರು ಬಿಡುಗಡೆ ಮಾಡಿ ಈ ಮಹಾಯಾಗಕ್ಕೆ ಭಾಗವಹಿಸುವುದಕ್ಕೆ ರಾಣೆಬೆನ್ನೂರು ತಾಲೂಕಿನ ಅರೆಮಲ್ಲಾಪುರ ಗ್ರಾಮದಲ್ಲಿರುವ ಶ್ರೀ ಶರಣಬಸವೇಶ್ವರ ಮಠಕ್ಕೆ ಆಗಮಿಸುತ್ತೇನೆಂದು ಕೇಂದ್ರ ಸಚಿವರು ಶ್ರೀಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಜಗದ್ಗುರು ಶ್ರೀ ದೊಡ್ಡ ಮಹಾಸ್ವಾಮಿಗಳು, ಈಡಿಗ ಸಮಾಜದ ಮುಖಂಡ ಬಾಲರಾಜ್ ಗುತ್ತೇದಾರ್ ಶ್ರೀಗಳೊಂದಿಗೆ ಉಪಸ್ಥಿತರಿದ್ದರು.

 

- Advertisement -  - Advertisement - 
Share This Article
error: Content is protected !!
";