ಚಂದ್ರವಳ್ಳಿ ನ್ಯೂಸ್, ನೆಲಮಂಗಲ:
ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಉತ್ತಮ ಸಮಾಜ ನಿರ್ಮಿಸುವ ಹೊಣೆ ಪತ್ರಿಕೆಗಳ ಮೇಲಿದೆ ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶುಕ್ರವಾರ ಸಂಜೆ ಅಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪತ್ರಿಕೆಗಳು ಸದಾ ಕಾಲವೂ ಸಮಾಜಕ್ಕೆ ಪ್ರತಿಸ್ಪಂದಿಸುವ ಕೆಲಸವನ್ನು ಮಾಡುತ್ತಲೇ ಬಂದಿವೆ. ಪ್ರತಿಯೊಬ್ಬರು ವಿಶ್ವಾಸವಾಗಿ ಯಾವುದೇ ಬೇಧಭಾವವಿಲ್ಲದೆ ಒಗ್ಗೂಡಿ ಕಾರ್ಯಕ್ರಮಕ್ಕೆ ಭಾಗವಹಿಸಿರುವುದು ಸಂತೋಷಕರ ಸಂಗತಿ. ಪತ್ರಕರ್ತರು ಕೆಲಸದ ಒತ್ತಡಗಳ ನಡುವೆ ಆರೋಗ್ಯದ ಕಡೆ ಗಮನ ಹರಿಸಬೇಕಾಗಿದೆ. ನೂತನವಾಗಿ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನೆಗಳು. ಸಂಘವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಕೈಜೋಡಿಸುವ ಕಾರ್ಯಕ್ಕೆ ಮುಂದಾಗಬೇಕು. ಸಂಘದಲ್ಲಿ ಮಹಿಳೆಯರಿಗೆ ಸೂಕ್ತವಾದ ಸ್ಥಾನಮಾನ ನೀಡಿವ ಕೆಲಸ ಪತ್ರಕರ್ತರ ಸಂಘಟನೆಯಿಂದ ಮಾಡಿದ್ದು ಸಂತೋಷಕರ ಸಂಗತಿ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್‌ಚೌಧರಿ ಮಾತನಾಡಿ ಸುಮಾರು ವರ್ಷಗಳಿಂದ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಿನಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪತ್ರಕರ್ತರು ಹಾಗೂ ಪತ್ರಿಕಾ ವಿತರಕ ಶ್ರೇಯೋವೃದ್ಧಿಗೆ ಶ್ರಮಿಸುತ್ತಿದೆ. ಪತ್ರಕರ್ತರ ಸಮಾಜಕ್ಕೆ ಮಾದರಿಯಾಗುವ ಕಾರ್ಯಕ್ರಮವನ್ನು ಮಾಡುತ್ತಿದ್ದು ಸಂತೋಷಕರ ಸಂಗತಿ. ಕಳೆದ 25 ವರ್ಷಗಳ ಹಿಂದೆ ನಾನೊಬ್ಬ ಪತ್ರಿಕಾ ವಿತರಕನಾಗಿ ಇಂದು ಈ ಮಟ್ಟದಲ್ಲಿ ಇದ್ದೇನೆ. ಪ್ರತಿಕಾ ಧರ್ಮವನ್ನು ಎತ್ತಿ ಹಿಡಿಯುವ ಕೆಲಸ ಪ್ರತಿಯೊಬ್ಬರು ಪತ್ರಕರ್ತರು ಮಾಡಬೇಕಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ ಕಳೆದ 1932ರಲ್ಲಿ ಡಿವಿ. ಗುಂಡಪ್ಪ ಅವರು ಸ್ಥಾಪನೆ ಮಾಡಿದ್ದು ಪ್ರಸ್ತುತ ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆದಿದೆ. ನೆಲಮಂಗಲ ತಾಲೂಕಿನಲ್ಲಿ 20 ಸದಸ್ಯರು ಮಾತ್ರ ವಿದ್ದು ಪ್ರಸ್ತುತದಲ್ಲಿ 45ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದ್ದಾರೆ. ಇತ್ತೀಚೆಗೆ ನಡೆದ ಸಂಘದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ನೆಲಮಂಗಲ ತಾಲೂಕಿನ ಸದಸ್ಯರು ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡು ಜಿಲ್ಲೆಗೆ ಉತ್ತಮ ಹೆಸರು ತಂದುಕೊಟ್ಟಿದ್ದಾರೆ. ಅಧಿಕಾರಿ ಶಾಶ್ವತವಲ್ಲ ಅಧಿಕಾರ ಅವಧಿಯಲ್ಲಿ ಮಾಡಿದ್ದ ಕಾರ್ಯ ಮಾತ್ರ ಶಾಶ್ವತ ವಾಗಿ ಉಳಿಸುತ್ತವೆ. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಸಂಘದ ಘಟನೆಯಂತೆ ನಡೆದುಕೊಂಡು ತಾಲೂಕು ಸಂಘವನ್ನು ಮತ್ತಷ್ಟು ಬಲ ಪಡಿಸುವ ಕಾರ್ಯ ಮಾಡಬೇಕಿದೆ ಎಂದರು.
ಪದಗ್ರಹಣ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೆಲಮಂಗಲ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಟಿ.ಕೃಷ್ಣಪ್ಪ (ಬೂದಿಹಾಲ್‌ಕಿಟ್ಟಿ) , ಗೌರವಾಧ್ಯಕ್ಷರಾಗಿ ಎನ್.ಜಿ.ಗೋಪಾಲ್, ಉಪಾಧ್ಯಕ್ಷರಾಗಿ ಆರ್.ರಂಗನಾಥ್, ಹೆಚ್.ಸಿ.ರುದ್ರೇಶ್, ಖಜಾಂಚಿಯಾಗಿ ಎನ್.ಸುಮಿತ್ರಾದೇವಿ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಸ್.ವಿಜಯ್‌ಕುಮಾರ್(ವೀಳ್ಯದೆಲೆ) ಕಾರ್ಯದರ್ಶಿಯಾಗಿ ಹೆಚ್.ಪಿ.ಮಹೇಶ್, ಎಂ.ಹರೀಶ್ ಸೇರಿದಂತೆ 13 ಮಂದಿ ಸದಸ್ಯರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೀತಗಾಯನ: ಪದಗ್ರಹಣ ಕಾರ್ಯಕ್ರಮಕ್ಕೂಮುನ್ನಾ ಖ್ಯಾತ ಗಾಯಕ ಚಿಕ್ಕಮಾರನಹಳ್ಳಿಸಿದ್ದಯ್ಯ ಮತ್ತು ತಂಡದಿಂದ ಗೀತಗಾಯನ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಸಂದರ್ಭದಲ್ಲಿ ನೆ.ಯೋ. ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್‌ಗೌಡ, ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಪೂರ್ಣಿಮಸುಗ್ಗರಾಜು, ಸದಸ್ಯ ಎನ್.ಗಣೇಶ್, ಮಾಜಿ ನಾಮ ನಿರ್ದೇಶಿತ ಸದಸ್ಯ ಕೆ.ವಸಂತ್, ನಗರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಶಶಿಧರ್, ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆ.ತಿಮ್ಮರಾಜು, ಕುವೆಂಪು ಪತ್ತಿನ ಸಹಕಾರ ಸಂಘದ ಅದ್ಯಕ್ಷ ಬಿ.ಕೆ.ನಟರಾಜು, ಮಾಜಿ ಅಧ್ಯಕ್ಷ ಹೆಚ್.ಜಿ.ರಾಜು, ವಕೀಲ ಮನುಗೌಡ, ಬಿ.ಟಿ.ಮೋಹನ್‌ಕುಮಾರ್, ಇನ್ನರ್ ವೀಲ್ಹ್ ಮಾಜಿ ಅಧ್ಯಕ್ಷ ಮಂಜುಳಾ ಸಿದ್ದರಾಜು,
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಆರ್ ರಮೇಶ್, ಜಿಲ್ಲಾ ನಿರ್ದೇಶಕ ಜಿ.ಕೆ.ಸುಗ್ಗರಾಜು, ರಾಘವೇಂದ್ರ, ಸತೀಶ್, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಡಿ.ಚಂದ್ರಶೇಖರ್ ಉಪ್ಪಾರ್, ನೆಲಮಂಗಲ ತಾಲೂಕು ಅಧ್ಯಕ್ಷ ಟಿ.ಕೃಷ್ಣಪ್ಪ, ನಿಕಟಪೂರ್ವ ಅಧ್ಯಕ್ಷ ಆರ್.ಪ್ರಮೋದ್‌ಕುಮಾರ್, ಪ್ರಧಾನ ಕಾರ್ಯದರ್ಶಿ ವಿಜಯ್‌ಕುಮಾರ್, ಖಜಾಂಚಿ ಸುಮಿತ್ರಾದೇವಿ, ಮುಖಂಡ ಆನಂದ್, ತಿಮ್ಮೇಗೌಡ, ಡಿ.ಸಿದ್ದರಾಜು, ಸಿ.ಹೆಚ್.ಸಿದ್ದಯ್ಯ, ಸಾಹಿತಿ ಪ್ರಕಾಶ್ ಮೂರ್ತಿ, ಡಾ.ಶಿವಲಿಂಗಯ್ಯ ಪ್ರಜಾಕವಿ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.