ಹರ್ತಿಕೋಟೆ ಪಂಚಾಯತ್ ಗ್ರಾಮಸ್ಥರಿಗೆ ಸಿಹಿ ಸುದ್ದಿ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಗ್ರಾಮಸ್ಥರಿಗೆ  ದೀಪಾವಳಿ ಸಿಹಿ ಸುದ್ದಿ ಏನೆಂದರೆ
, ಇ ಸ್ವತ್ತು ಪಡೆಯಲು ಹರಸಾಹಸ ಪಡುತ್ತಿದ್ದರೆ, ವಿಳಂಬವಾಗುತ್ತಿದ್ದರೆ ಕೂಡಲೇ ಸಿದ್ದರಾಗಿ,

ತಮ್ಮ ಆಸ್ತಿಗಳ ಎಲ್ಲಾ ದಾಖಲೆಗಳನ್ನು ಸೂಕ್ತವಾಗಿ ಸಂಗ್ರಹಿಸಿಕೊಂಡು ಪಂಚಾಯತಿ ಅಭಿವೃದ್ಧಿ ಅಧಿಕಾರಿ ರತ್ನಮಾಲಾ ಅವರನ್ನು ಭೇಟಿ ಮಾಡಿ ಅತೀ ಕಡಿಮೆ ಅವಧಿಯಲ್ಲಿ ಇ-ಸ್ವತ್ತು ಪಡೆಯಿರಿ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗವೇಣಿ ಹನುಮಂತಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement - 

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಇ ಸ್ವತ್ತು ಪಡೆಯುವ ಪ್ರಕ್ರಿಯೆ ಬಗ್ಗೆ ದೂರುಗಳಿದ್ದು, ಸರ್ಕಾರಕ್ಕೆ ಪಾವತಿಸಬೇಕಾದ ಮೊತ್ತವನ್ನು ಮಾತ್ರ ನಿಗಧಿತ ಸಮಯದಲ್ಲಿ ಪಾವತಿಸಿ ರಸೀದಿ ಮತ್ತು

ಇ ಸ್ವತ್ತು ಪಡೆದುಕೊಳ್ಳುವ ಮೂಲಕ ಅನೇಕ ದಿನಗಳಿಂದ ಇರುವ ಕಿರಿಕಿರಿ, ಮಾನಸಿಕ ಒತ್ತಡ ಮತ್ತು ಸಮಸ್ಯೆಯಿಂದ ಮುಕ್ತರಾಗಿ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗವೇಣಿ ಹನುಮಂತಪ್ಪ ಮನವಿ ಮಾಡಿದ್ದಾರೆ.

- Advertisement - 

 

Share This Article
error: Content is protected !!
";