ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಯುವ ಕರ್ನಾಟಕ ವೇದಿಕೆ ರೂಪೇಶ್ ರಾಜಣ್ಣ ಬಣದ ಜಿಲ್ಲಾ ಅಧ್ಯಕ್ಷ ರವಿಕುಮಾರ್ ನಾಯ್ಕ್ ಅಧ್ಯಕ್ಷತೆಯಲ್ಲಿ ನಡೆಯಿತು,
ಸಭೆ ಉದ್ದೇಶಿಸಿ ಮಾತನಾಡಿದ ರವಿಕುಮಾರ್ ನಾಯ್ಕ್ ನಮ್ಮ ನಾಡು ನಮ್ಮ ಜಲ ನಮ್ಮ ಭಾಷೆಗೆ ಮೊದಲು ಪ್ರಧಾನ್ಯತೆ ಕೊಡಬೇಕು. ನಮ್ಮ ರಾಜ್ಯದ ಕವಿಗಳಿಗೆ ಹೋರಾಟ ಗಾರರರಿಗೆ ಗೌರವ ನೀಡಬೇಕು ಎಂದು ತಿಳಿಸಿ, ಚಳ್ಳಕೆರೆ ತಾಲೂಕಿನಲ್ಲಿ ಒಳ್ಳೆಯ ಒಡನಾಟ ಮತ್ತು ಎಲ್ಲಾ ಸಮುದಾಯದವರ ಜೊತೆಗೆ ಬೆರೆತು ಮತ್ತು ಒಳ್ಳೆಯ ವ್ಯಕ್ತಿತ್ವ ಹೊಂದಿರುವ ಸಯ್ಯದ್ ನಬಿ ರವರಿಗೆ ನಾವು ಮತ್ತು ಜಿಲ್ಲಾ ಕಮಿಟಿಯ ಒಪ್ಪಿಗೆ ಮೇರೆಗೆ ಚಳ್ಳಕೆರೆ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಅಧ್ಯಕ್ಷ ಸ್ಥಾನ ವಹಿಸಿಕೊಂಡು ಮಾತನಾಡಿದ ಸಯ್ಯದ್ ನಬಿ, ನಾನು ಮೊದಲಿಗೆ ಕನ್ನಡಿಗ, ನಮ್ಮ ನಾಡು ಜಲ ನಮ್ಮ ಜಿಲ್ಲೆ ಮತ್ತು ನಮ್ಮ ತಾಲೂಕಿನಲ್ಲಿ ಎಲ್ಲರ ಜೊತೆಗೂಡಿ ಮುಂದೆ ಸಾಗುತ್ತಾ ಬಡವರ ಪರ ಮತ್ತು ನ್ಯಾಯದ ಪರ ನಿಷ್ಠಾವಂತವಾಗಿ ಕೆಲಸ ಮಾಡುತ್ತೇನೆ ಮತ್ತು ಸಂಘಟನೆ ಮಾಡುತ್ತೇನೆ ಎಂದು ತಿಳಿಸಿದರು.
ನ್ಯಾಯದ ವಿಚಾರದಲ್ಲಿ ಯಾರ ಒತ್ತಡಕ್ಕೂ ಮಣಿಯದೆ ನೇರವಾಗಿ ಅನ್ಯಾಯದ ಪರ ಹೋರಾಡುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸ್ಪೈಸಿ ಡಾಬಾ ಮಾಲೀಕ ತಿಪ್ಪೇಸ್ವಾಮಿ, ಪೂಜಾರು ರೇಣುಕಾ ಸ್ವಾಮಿ ರವರು ಸಂಘಟನೆಗೆ ಸೇರ್ಪಡೆಯಾದರು.
ಜಿಲ್ಲಾ ಕಾರ್ಯಧ್ಯಕ್ಷ ಓಬಣ್ಣ, ಸಯ್ಯದ್ ಶಫಿ, ರಫೀಕ್ ಭಾಯ್, ದಿಲೀಪ್ ಇನ್ನು ಅನೇಕರು ಇದ್ದರು.
ರೂಪೇಶ್ ರಾಜಣ್ಣ ಬಣದ ಯುವ ಕರ್ನಾಟಕ ವೇದಿಕೆ ಅಧ್ಯಕ್ಷರಾಗಿ ಸಯ್ಯದ್ ನಬಿ ಆಯ್ಕೆ

